ನಾರ್ತ್ ಸೌಂಡ್ (ಆ್ಯಂಟಿಗಾ): ಅಮೆರಿಕ ತಂಡವು ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ಮೊದಲ ಪಂದ್ಯದಲ್ಲಿ ಪ್ರಬಲ ದಕ್ಷಿಣ ಆಫ್ರಿಕಾ ತಂಡವನ್ನು ಬುಧವಾರ ಎದುರಿಸಲಿದೆ.ಈ ಟೂರ್ನಿಯಲ್ಲಿ ಅಜೇಯವಾಗುಳಿದಿರುವ ತಂಡಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಒಂದಾಗಿದೆ. ಸೂಪರ್ ಎಂಟರಲ್ಲಿ ಎರಡನೇ
ಗುಂಪಿನಲ್ಲಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮುಂದಿನ ಪಂದ್ಯಗಳನ್ನು ಹಾಲಿ ಚಾಂಪಿಯನ್ ಇಂಗ್ಲೆಂಡ್, ಆತಿಥೇಯ ವೆಸ್ಟ್ ಇಂಡೀಸ್ ಎದುರು ಆಡಬೇಕಾಗಿರುವ ಕಾರಣ ಅಮೆರಿಕದ ವಿರುದ್ಧದ ಪಂದ್ಯವನ್ನು ಗೆಲುವಿನೊಡನೇ ಆರಂಭಿಸುವ ಸವಾಲು ಇದೆ.
ಭಾರತ ಮೂಲದ ಎಂಟು, ಪಾಕ್ ಮೂಲದ ಇಬ್ಬರು, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ ಮೂಲದ ತಲಾ ಒಬ್ಬರನ್ನು ಹೊಂದಿರುವ ಅಮೆರಿಕ ತನ್ನ ಮೊದಲ ಯತ್ನದಲ್ಲೇ ಸೂಪರ್ ಎಂಟಕ್ಕೆ ಲಗ್ಗೆಹಾಕಿದ್ದು, ಉತ್ಸಾಹದಿಂದಿದೆ. ಮೊನಾಂಕ್ ಪಟೇಲ್ ಸಾರಥ್ಯದ ತಂಡವು, ಆಕ್ರಮಣಕಾರಿ ಆಟದ ಬ್ರಾಂಡ್ ಪ್ರದರ್ಶಿಸಿದೆ.
ಪಂದ್ಯ ಆರಂಭ: ರಾತ್ರಿ 8.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಹಾಟ್ಸ್ಟಾರ್ ಆ್ಯಪ್