ಸುಳ್ಯ :ಬೆಳ್ಳಿ ಹಬ್ಬ ಆಚರಿಸಿದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದ ಯಶಸ್ವಿಯಾಗಿ ನಡೆಸಿಕೊಟ್ಟ ಸರ್ವರಿಗೂ ಕೃತಜ್ಞತಾ ಸಭೆ ಜ 26 ಜೋಸೆಫ್ ಶಾಲೆ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಸಂಚಲಾಕರಾದ ರೆ.ಫಾ.ವಿಕ್ಟರ್ ಡಿಸೋಜ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದವರಿಗೆ ಅಭಿನಂದನೆ ಸಲ್ಲಿಸಿ ರಜತ ಮಹೋತ್ಸವ ಕಾರ್ಯಕ್ರಮದ
ಲೆಕ್ಕಾಚಾರವನ್ನು ಮಂಡಿಸಿದರು.ವೇದಿಕೆಯಲ್ಲಿ ಪೋಷಕ ಸಮತಿ ಉಪಾಧ್ಯಕ್ಷರಾದ ಹೇಮನಾಥ್ ಕೊಡಿಯಾಲಬೈಲ್, ಶಶಿಧರ ಎಂ ಜೆ,ಪ್ರಬೋದ್ ರೈ ಮೇನಾಲ,ರಜತ ಮಹೋತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಅನುರಾಧಾ ಕುರುಂಜಿ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ, ಕಾರ್ಯದರ್ಶಿ ಜೂಲಿಯಾನ ಕ್ರಾಸ್ತ, ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೇಲ್ಲಾ ಸ್ವಾಗತಿಸಿ
ಶಿಕ್ಷಕಿ ದೇವಿಲತಾ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ರುಪ್ಸಾ ಕರ್ನಾಟಕ ಇದರ ವತಿಯಿಂದ ಕೊಡಮಾಡಲ್ಪಡುವ ಶಿಕ್ಷಣ ಸಂಸ್ಥೆಗಳ ಉತ್ತಮ ಆಡಳಿತಗಾರರಿಗೆ ನೀಡುವ ಶಿಕ್ಷಣ ಭೀಷ್ಮ ಪ್ರಶಸ್ತಿ ಗಳಿಸಿದ ಸೈಂಟ್ ಜೋಸೆಫ್ ಶಾಲೆಯ ಸಂಚಾಲಕರಾದ ರೆ.ಫಾ.ವಿಕ್ಟರ್ ಡಿಸೋಜ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ರಜತ ಮಹೋತ್ಸವ ಸಮಿತಿ ಸದಸ್ಯರಾಸ ಚಿದಾನಂದ ವಿದ್ಯಾನಗರ,ಶಶಿಧರ ಎಂ ಜೆ,ನಗರ ಪಂಚಾಯತ್ ಸದಸ್ಯರಾದ ಡೇವಿಡ್ ದೀರಾ ಕ್ರಾಸ್ತ ಹಾಗೂ ರಜತ ಮಹೋತ್ಸವ ಸಮಿತಿಯವರು ಶುಭ ಹಾರೈಸಿದರು.