ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ಎಂ.ಎಲ್ ಅಶ್ವಿನಿಗೆ ಅಧಿಕಾರ ವಹಿಸಿಕೊಂಡಿದ್ದಾರೆ.
ಬಿ.ಜೆ ಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಪಕ್ಷದ ನೂತನ ಜಿಲ್ಲಾಧ್ಯಕ್ಷೆಯಾಗಿ ಎಂ.ಎಲ್. ಅಶ್ವಿನಿ ಇಂದು ಜವಾಬ್ದಾರಿ ವಹಿಸಿ ಪದಗ್ರಹಣ ಮಾಡಿದರು. ಅಧ್ಯಕ್ಷರಾಗಿದ್ದ ರವೀಶ್ ತಂತ್ರಿ ಕುಂಟಾರು ಪಕ್ಷದ
ರಾಜ್ಯ ನಾಯಕರ ಸಮ್ಮುಖ ಅಧ್ಯಕ್ಷ ಪದವಿ ವಹಿಸಿಕೊಂಡರು. ಪಕ್ಷದ ಆಂತರಿಕ ಸಂಘಟನಾ ಚುನಾವಣೆಯ ಚುನಾವಣಾ ಅಧಿಕಾರಿಯಾಗಿದ್ದ ನ್ಯಾಯವಾದಿ ಸುರೇಶ್ ಅಧ್ಯಕ್ಷತೆ ವಹಿಸಿದರು. ಪಕ್ಷದ ರಾಜ್ಯ ವಕ್ತಾರ ನಾರಾಯಣನ್ ನಂಬೂದಿರಿ, ಮಾಜಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ, ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್, ಹಿರಿಯ ನಾಯಕರಾದ ಎಂ.ಸಂಜೀವ ಶೆಟ್ಟಿ, ಕೆ.ಕರುಣಾಕರನ್ ನಾಯರ್, ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಸವಿತಾ ಟೀಚರ್, ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ, ಅಶೋಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ವೇಲಾಯುಧನ್ ಸ್ವಾಗತಿಸಿದರು.ಅಶ್ವಿನಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು.