ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದಲ್ಲಿ ಸದರ್ನ್ ರೈಲ್ವೇ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಮೂರನೇ ಕ್ವಾರ್ಟರ್ ಫೈನಲ್ನ ರೋಮಾಂಚಕಾರಿ ಪಂದ್ಯದಲ್ಲಿ
ಸದರ್ನ್ ರೈಲ್ವೇ ತಂಡವು ಟಿಎಂಸಿ ಥಾಣೆ ತಂಡವನ್ನು 44-34 ಪಾಯಿಂಟ್ ಅಂತರದಲ್ಲಿ ಮಣಿಸಿ ಸೆಮಿಫೈನಲ್ಗೆ ಪ್ರವೇಶ ಪಡೆಯಿತು. ಸದರ್ನ್ ರೈಲ್ವೇ ಪರ ಪ್ರೊ ಕಬಡ್ಡಿ ಆಟಗಾರರಾದ ನರೇಂದ್ರ ಖಂಡೋಲ, ಸತೀಶ್ ಹಾಗು ರೋಹಿತ್ ಭರ್ಜರಿ ಪ್ರದರ್ಶನ ನೀಡಿ ಅಂಕಗಳನ್ನು ಬಾಚಿದರು.
ಈ ಮೂಲಕ ಸದರ್ನ್ ರೈಲ್ವೇ ಅನಾಯಾಸವಾಗಿ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿತು.ಕೊನೆಯ ಹಂತದಲ್ಲಿ ಟಿಎಂಸಿ ತಂಡ ಕೆಲವು ಉತ್ತಮ ದಾಳಿ ಮತ್ತು ಹಿಡಿತದ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದರೂ, ಸದರ್ನ್ ರೈಲ್ವೇ ತಂಡ ರಕ್ಷಣಾತ್ಮಕ ಆಟದ ಮೂಲಕ ಪಂದ್ಯ ಗೆದ್ದಿತು.









