ಚಂಢೀಗಡ: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಮಧ್ಯಪ್ರದೇಶ ತಂಡದ ನಾಯಕ ರಜತ್ ಪಾಟಿದಾರ್ ಸ್ಫೋಟಕ ಶತಕ ಸಿಡಿಸಿದ್ದಾರೆ. ಪಾಟಿದಾರ್ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಶತಕದ ನಂತರವೂ ಅಬ್ಬರಿಸಿದ ಅರ್ಸಿಬಿ ತಂಡದ
ನಾಯಕ ಪಾಟಿದಾರ್ 48 ಎಸೆತಗಳಲ್ಲಿ 13 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ ಅಜೇಯ 135 ರನ್ ಸಿಡಿಸಿದರು.ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಪಾಟಿದಾರ್ 24 ಎಸೆತಗಳಲ್ಲಿ 48 ರನ್ ಗಳಿಸಿದ್ದರು. ನಂತರದ ಐದು ಓವರ್ಗಳಲ್ಲಿ 24 ಎಸೆತಗಳನ್ನು ಎದುರಿಸಿದ ಅವರು 87 ರನ್ ಸಿಡಿಸಿದರು.ಪಾಟಿದಾರ್ ಅವರ ಸ್ಫೋಟದ ಆಟದ ನೆರವಿನಿಂದ ಮಧ್ಯಪ್ರದೇಶವು 20 ಓವರ್ಗಳಲ್ಲಿ 6 ವಿಕೆಟ್ಗೆ 250 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಸ್ಸಾಂ ಕೇವಲ 119 ರನ್ಗಳಿಗೆ ಆಲೌಟ್ ಆಯಿತು. ಆ ಮೂಲಕ ಮಧ್ಯಪ್ರದೇಶ 131 ರನ್ಗಳ ಗೆಲುವು ದಾಖಲಿಸಿತು.














