ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತವು ಮೊದಲ ಇನಿಂಗ್ಸ್ನಲ್ಲಿ 118 ರನ್ಗಳ ಮುನ್ನಡೆ ದಾಖಲಿಸಿದೆ.ಮೊದಲ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ ಗಳಿಸಿದ್ದ 368 ರನ್ಗಳಿಗೆ ಉತ್ತರವಾಗಿ
ಬ್ಯಾಟಿಂಗ್ ಮಾಡುತ್ತಿರುವ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 486 ರನ್ ಗಳಿಸಿತ್ತು.ಕೆ.ಎಲ್. ರಾಹುಲ್ ಅವರ ತಾಳ್ಮೆಯ ಶತಕ(136), ಶತಕ ವಂಚಿತ ನಾಯಕ ಶುಭಮನ್ ಗಿಲ್ (98) ಮತ್ತು ದೇವದತ್ತ ಪಡಿಕ್ಕಲ್(80) ಅವರ ಅರ್ಧ ಶತಕಗಳ ನೆರವಿನಿಂದ ಭಾರತ ಇನಿಂಗ್ಸ್ ಮುನ್ನಡೆ ದಾಖಲಿಸಲು ಸಾಧ್ಯವಾಯಿತು.ಇದಕ್ಕೂ ಮುನ್ನ, 85 ರನ್ ಸಿಡಿಸಿದ್ದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. 55 ರನ್ ಗಳಿಸಿರುವ ರಿಷಬ್ ಪಂತ್ ಮತ್ತು ಇನ್ನೂ ಖಾತೆ ತೆರೆಯದ ಅಂಶುಲ್ ಕಾಂಬೋಜ್ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.ನ್ಯೂಜಿಲೆಂಡ್ ಪರ ಜೇಕಬ್ ಡಫಿ, ಜಾಮೀಸನ್, ಮ್ಯಾಟ್ ಹೆನ್ರಿ ಮತ್ತು ನಥನ್ ಸ್ಮಿತ್ ತಲಾ ಒಂದು ವಿಕೆಟ್ ಉರುಳಿಸಿದ್ದಾರೆ.
















