ವೆಲಿಂಗ್ಟನ್:ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಕಿವೀಸ್ ಕಲೆಹಾಕಿರುವ 368 ರನ್ಗೆ ಎದುರಾಗಿ ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ಗೆ 159 ರನ್ ಗಳಿಸಿದೆ.ಭಾರತದ ಪರ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಹಾಗೂ
ಕೆ.ಎಲ್. ರಾಹುಲ್, ಮೊದಲ ವಿಕೆಟ್ಗೆ 130 ರನ್ ಕಲೆಹಾಕಿದರು. ಏಕದಿನ ಮಾದರಿಯಂತೆ ಬ್ಯಾಟ್ ಬೀಸಿದ ಜೈಸ್ವಾಲ್, 89 ಎಸೆತಗಳಲ್ಲಿ 85 ರನ್ ಗಳಿಸಿ ಔಟಾದರು. 15 ರನ್ ಅಂತರದಿಂದ ಶತಕ ತಪ್ಪಿಸಿಕೊಂಡ ಜೈಸ್ವಾಲ್ಗೆ ಇದು ಟೆಸ್ಟ್ನಲ್ಲಿ 14ನೇ ಅರ್ಧಶತಕ.52 ರನ್ ಗಳಿಸಿರುವ ರಾಹುಲ್ ಮತ್ತು 16 ರನ್ ಗಳಿಸಿರುವ ದೇವದತ್ತ ಪಡಿಕ್ಕಲ್ ಕ್ರೀಸ್ನಲ್ಲಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ಗೆ 243 ರನ್ ಗಳಿಸಿದ್ದ ಆತಿಥೇಯರು, ಹೆನ್ರಿ ನಿಕೋಲ್ಸ್ (ಅಜೇಯ 175 ರನ್) ಹಾಗೂ ಗ್ಲೆನ್ ಫಿಲಿಪ್ಸ್ (118 ರನ್) ಸಿಡಿಸಿದ ಶತಕಗಳ ಬಲದಿಂದ 368ರನ್ ಕಲೆ ಹಾಕ್ ಆಲ್ ಔಟ್ ಆಯಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರು.













