ವೆಲ್ಲಿಂಗ್ಟನ್:ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆತಿಥೇಯ ನ್ಯೂಜಿಲೆಂಡ್ ಪಡೆ ಭಾರತದ ವಿರುದ್ಧ ಮೊದಲ ಟೆಸ್ಟ್ನ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ. ಹೆನ್ರಿ ನಿಕೋಲ್ಸ್ ಹಾಗೂ ಗ್ಲೆನ್ ಫಿಲಿಪ್ಸ್ ಅವರ ದಿಟ್ಟ ಆಟದಿಂದಾಗಿ ಉತ್ತಮ ಮೊತ್ತ ಕಲೆಹಾಕುವತ್ತ ಹೆಜ್ಜೆ ಹಾಕಿದೆ.ಟಾಸ್ ಗೆದ್ದ
ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್, ಎದುರಾಳಿಯನ್ನು ಬ್ಯಾಟಿಂಗ್ ಆಹ್ವಾನಿಸಿದರು. ವೇಗಿಗಳು ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ದಾಳಿ ಸಂಘಟಿಸಿದರು.ನಾಲ್ಕು ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿರುವ ವೇಗಿ ಜಸ್ಪ್ರಿತ್ ಬೂಮ್ರಾ ಕಿವೀಸ್ ಪಡೆಗೆ ಮೊದಲ ಓವರ್ನಲ್ಲೇ ಪೆಟ್ಟು ನೀಡಿದರು. ಅನುಭವಿ ಡೆವೋನ್ ಕಾನ್ವೆ ಜೊತೆ ಇನಿಂಗ್ಸ್ ಆರಂಭಿಸಿದ ಕಿವೀಸ್ ನಾಯಕ ಟಾಮ್ ಲೇಥಮ್ ಅವರನ್ನು ಖಾತೆ ತೆರೆಯುವ ಮೊದಲೇ ಪೆವಿಲಿಯನ್ಗೆ ಅಟ್ಟಿದರು.ಬೂಮ್ರಾಗೆ ಸಾಥ್ ನೀಡಿದ ಆಕಾಶ್ ದೀಪ್ ಮತ್ತು
ಅನ್ಶುಲ್ ಕಾಂಬೋಜ್, ಕಾನ್ವೆ (4 ರನ್) ಮತ್ತು ರಚಿನ್ ರವೀಂದ್ರ (15 ರನ್) ಅವರನ್ನು ಔಟ್ ಮಾಡಿದರು.ಮಧ್ಯಮ ಕ್ರಮಾಂಕದ ಡೆರಿಲ್ ಮಿಚೇಲ್ (1 ರನ್) ಹಾಗೂ ಟಾಮ್ ಬ್ಲಂಡೆಲ್ (5 ರನ್) ಅವರ ವಿಕೆಟ್ಗಳನ್ನು ಬೆನ್ನುಬೆನ್ನಿಗೆ ಪಡೆದ ಬೂಮ್ರಾ, ಮಧ್ಯಮ ಕ್ರಮಾಂಕದ ಎಲುಬು ಮುರಿದರು.ಹೀಗಾಗಿ, ತಂಡದ ಮೊತ್ತ 70 ರನ್ ಆಗುವಷ್ಟರಲ್ಲೇ ಪ್ರಮುಖ ಐದು ವಿಕೆಟ್ ಪತನಗೊಂಡವು. ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಕಿವಿಸ್ಗೆ ಹೆನ್ರಿ ನಿಕೋಲ್ಸ್ ಹಾಗೂ ಗ್ಲೆನ್ ಫಿಲಿಪ್ಸ್ ಆಸರೆಯಾದರು. ಈ ಜೋಡಿ ಮುರಿಯದ ಆರನೇ ವಿಕೆಟ್ ಪಾಲುದಾರಿಕೆಯಲ್ಲಿ 173 ರನ್ ಕಲೆಹಾಕಿದೆ.ಟೀಂ ಇಂಡಿಯಾ ಬೌಲರ್ಗಳ
ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಇಬ್ಬರು, ದಿನದಾಟ ಮುಗಿಯುವವರೆಗೂ ವಿಕೆಟ್ ಬಿಟ್ಟುಕೊಡದೆ ಆಡಿದರು.221 ಎಸೆತಗಳನ್ನು ಎದುರಿಸಿದ ಹೆನ್ರಿ 113 ರನ್ ಗಳಿಸಿದ್ದಾರೆ. 182 ಎಸೆತಗಳನ್ನು ಎದುರಿಸಿರುವ ಫಿಲಿಪ್ಸ್ 94 ರನ್ ಬಾರಿಸಿ ಶತಕದ ಹೊಸ್ತಿಲಲ್ಲಿ ನಿಂತಿದ್ದಾರೆ.ಭಾರತ ಪರ ಬೂಮ್ ಎರಾ ಮೂರು ವಿಕೆಟ್ ಪಡೆದರೆ, ಕಾಂಬೋಜ್ ಮತ್ತು ಆಕಾಶ್ ಒಂದೊಂದು ವಿಕೆಟ್ ಉರುಳಿಸಿದ್ದಾರೆ. ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಗೆ ಈ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ.














