ಚೆನ್ನೈ: ಮಹೇಂದ್ರ ಸಿಂಗ್ ಧೋನಿ ಐಪಿಎಲ್ನಿಂದ ನಿವೃತ್ತಿ ಘೋಷಿಸಿದ್ದಾರೆ.2027ರ ಐಪಿಎಲ್ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ತಂಡದ ಮಾಲೀಕ ಎನ್. ಶ್ರೀನಿವಾಸನ್ ಅವರು ಧೋನಿ ಅವರ
ಮಹತ್ವವನ್ನು ಸ್ಮರಿಸಿದ್ದು, ತಂಡದ ಗುರುತಿನೊಂದಿಗೆ ಅವರ ಹೆಸರು ಸದಾ ಬೆಸೆದುಕೊಂಡಿರುತ್ತದೆ ಎಂದಿದ್ದಾರೆ.’ಎಂ.ಎಸ್. ಧೋನಿ ಇಲ್ಲದೆ ಸಿಎಸ್ಕೆ ಇಲ್ಲ. ಸುಮಾರು ಎರಡು ದಶಕಗಳಿಂದ ನಾವು ಒಟ್ಟಿಗೆ ಬೆಳೆದಿದ್ದೇವೆ. ಗೆಲುವು, ಸೋಲು ಸೇರಿದಂತೆ ಎಲ್ಲ ಸಂದರ್ಭಗಳಲ್ಲೂ ಜೊತೆಯಾಗಿದ್ದೇವೆ’ ಎಂದು ಶ್ರೀನಿವಾಸನ್ ಹೇಳಿದ್ದಾರೆ. 17 ವರ್ಷಗಳ ಕಾಲ ಸಿಎಸ್ಕೆ ಪರ ಆಡಿದ. ಧೋನಿ 272 ಪಂದ್ಯಗಳಲ್ಲಿ 5314 ರನ್ ಗಳಿಸಿದ್ದಾರೆ. ಬಾರಿ ಚೆನ್ನೈ ತಂಡವನ್ನು ಐಪಿಎಲ್ ಚಾಂಪಿಯನ್ ಆಗಿ ರೂಪಿಸಿದ್ದಾರೆ. ಕಳೆದ ವರ್ಷ ತಂಡದಲ್ಲಿದ್ದರೂ ಗಾಯದ ಕಾರಣ ಯಾವುದೇ ಪಂದ್ಯ ಆಡಿರಲಿಲ್ಲ














