ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದಲ್ಲಿ ಫ್ರೆಂಡ್ಸ್ ಕ್ಲಬ್ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ನಾಲ್ಕನೇ ಕ್ವಾರ್ಟರ್ ಫೈನಲ್ನಲ್ಲಿ
ಫ್ರೆಂಡ್ಸ್ ಕಡಬ ತಂಡವು ಐಸಿಎಫ್ ಚೆನ್ನೈ ತಂಡವನ್ನು 31-20 ಪಾಯಿಂಟ್ ಅಂತರದಲ್ಲಿ ಮಣಿಸಿ ಸೆಮಿಫೈನಲ್ಗೆ ಪ್ರವೇಶ ಪಡೆಯಿತು.ಮಾಯಾಂಕ್ ಸೈನಿ, ವಿಶ್ವರಾಜ್ ಮತ್ತು ಆದರ್ಶ್ ಅವರ ಉತ್ತಮ ದಾಳಿ ಹಾಗು ಸಂಘಟಿತ ಆಟದ ಮೂಲಕ ಪಂದ್ಯವನ್ನು ಗೆದ್ದು ಫ್ರೆಂಡ್ಸ್ ಕಡಬ ಸೆಮಿಫೈನಲ್ಗೆ ಮುನ್ನಡೆಯಿತು.









