ಸುಳ್ಯ: ಗುರು ಪೂರ್ಣಿಮಾ ದಿನದಂದು ನಾವೆಲ್ಲರೂ ಮಹಾ ಗುರುಗಳಾದ ವೇದವ್ಯಾಸರ ಆರಾಧನೆಯನ್ನು ಮಾಡುತ್ತೇವೆ. ಅವರು ನಾಲ್ಕು ವೇದಗಳನ್ನು ಸಂಪಾದಿಸಿದ ಮಹಾನ್ ಜ್ಞಾನಿ.ಗುರುಗಳೆಂದರೆ ನಮ್ಮ ತಪ್ಪುಗಳನ್ನು ತಿದ್ದುವ ಮಾರ್ಗದರ್ಶಕರು. ಅವರು ಹೇಳಿಕೊಟ್ಟಂತೆ ನಾವು
ತಪ್ಪುಗಳನ್ನು ತಿದ್ದಿಕೊಂಡು ನಡೆಯುವ ಮೂಲಕ ಗುರುಗಳಿಗೆ ಗೌರವವನ್ನು ಸಲ್ಲಿಸಬೇಕು ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು. ಅವರು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ, ಶಿಕ್ಷಕ ವೃಂದದವರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.














