ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ದಿವಸ್ ಅಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಮಂದಾರ ವಿದ್ಯಾರ್ಥಿ ಪರಿಷತ್ನ ಸ್ಥಾಪನೆ ಮತ್ತು
ಕಾರ್ಯವೈಖರಿಯನ್ನು ವಿವರಿಸಿದರು.ಜಿಲ್ಲಾ ಸಂಚಾಲಕ ಸಮನ್ವಿತ್ ಸದಸ್ಯತ್ವದ ಮಹತ್ವವನ್ನು ತಿಳಿಸಿದರು.ಮುಖ್ಯಉಪಾಧ್ಯಾಯ ಗಿರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಬಿವಿಪಿ ಸುಳ್ಯ ತಾಲೂಕು ಸಂಚಾಲಕ ನಂದನ್ ಪ್ರಸ್ತಾವಿಕವಾಗಿ ಮಾತನಾಡಿ ವಂದಿಸಿದರು. ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಅಮೃತಾಂಬ ಹಾಗೂ ಕಾಲೇಜು ಘಟಕದ ಅಧ್ಯಕ್ಷ ಕಿಶನ್
ಭಾಗವಹಿಸಿದ್ದರು.














