ಬೆಂಗಳೂರು: ಸಾಮಾಜಿಕ ಕಾಳಜಿಯೊಂದಿಗೆ ಸಾಹಿತಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ, ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಾಹಿತ್ಯ ಸಮ್ಮೇಳನಗಳ ಸಂಘಟಕರಾದ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಸ್ಥಾಪಕಾಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಅವರ 25 ವರ್ಷಗಳ ವೃತ್ತಿಜೀವನದ ಬೆಳ್ಳಿ ಹಬ್ಬದ ಪ್ರಯುಕ್ತ ತನ್ನ ತಂಡದ ಸಹೋದ್ಯೋಗಿ ಮಿತ್ರರರೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ
ನಡೆಯಿತು. ಬೆಂಗಳೂರಿನ ಮಾರತಹಳ್ಳಿ ಖಾಸಗೀ ಹೋಟೆಲ್ನಲ್ಲಿ ನಡೆಯಿತು. 30ಕ್ಕೂ ಹೆಚ್ಚು ಮಾನವ ಸಂಪನ್ಮೂಲ ವಿಭಾಗದ ಸಹೋದ್ಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ ಉಮ್ಮರ್ ಬೀಜದಕಟ್ಟೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ಆರೀಶ್ ಪೇರಡ್ಕ ಸ್ವಾಗತಿಸಿದರು.ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಅಂಬರೀಶ್, ಉಪ ಪ್ರಧಾನ ವ್ಯವಸ್ಥಾಪಕರಾದ ಹೇಮಂತ್ ಪಟೇಲ್, ಚೆಲುವರಾಜು ಮಾತನಾಡಿದರು. ಮಾನವ ಸಂಪನ್ಮೂಲ ವಿಭಾಗದ ಇಸಾಕ್,ರವಿಕುಮಾರ್ ಎನ್, ಶಶಾಂಕ್ ಸಿಂದಿಯಾ, ಶಿಲ್ಪಿ,ಮದು,ಪವನ್ ಕುಮಾರ್,ರಾಧಾಕೃಷ್ಣ
ಟೋನಿ ಫ್ರಾಝರ್, ಶಂಕರ್ ಬಿ ದಿಸಾಲೆ, ರಕ್ಷಿತ್ ಬಿ ಇ,ಕೃಷ್ಣಮೂರ್ತಿ
ಭರಾಕುಮಾರ್, ದೇವಿದಾಸ್,ಮೊಗೇರ್,ಅಂಬ್ರಿತ ಘೋಷ್, ಅರವಿಂದ್ ಎನ್,ಕಾರ್ತಿಕ್ ಕುಮಾರ್,ಎ ವಿ ನಾರಾಯಣ,ಶ್ರೀನಿವಾಸ್ ಎಂ,ಶಂಕರ್ ರಾಥೋಡ್ ಮೊದಲಾದವರು ಉಪಸ್ಥಿತರಿದ್ದರು.
ಮಾನವ ಸಂಪನ್ಮೂಲ ವಿಭಾಗದ ಅಯ್ಯೂಬ್ ಗೂನಡ್ಕ,ಮಂಜುನಾಥ್ ಹಿರಿಯೂರು,ಫೈಝಲ್ ಬೀಜದಕಟ್ಟೆ ,ಮಾಝಿನ್ ಬೀಜದಕಟ್ಟೆ ಕಾರ್ಯಕ್ರಮ ಸಂಘಟಿಸಿದರು.