ಆಂಟಿಗುವಾ: ಇಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ನಮೀಬಿಯಾ ವಿರುದ್ಧ ಭರ್ಜರಿ ಜಯ. ಪವರ್ ಪ್ಲೇನಲ್ಲೇ ಆಟ ಮುಗಿಸಿದ ಆಸೀಸ್ ಗೆಲುವಿನ ನಗೆ ಬೀರಿತು. ಮೊದಲು ಬ್ಯಾಟ್ ಮಾಡಿದ ನಮೀಬಿಯಾ 17 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 72 ರನ್ ಗಳಿಸಿತು. ಗುರಿ ಬೆನ್ನಟ್ಟಿದ
ಆಸ್ಟ್ರೇಲಿಯಾ5.4 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 74 ರನ್ ಗಳಿಸುವ ಮೂಲಕ 9 ವಿಕೆಟ್ಗಳ ಜಯ ದಾಖಲಿಸಿತು.
ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್ ಸ್ಪೋಟಕ ಆರಂಭ ಒದಗಿಸಿದರು. 1.4 ಓವರ್ಗಳಲ್ಲಿ 21 ರನ್ಗಳ ಜೊತೆಯಾಟವಾಡಿದ ಬಳಿಕ ಡೇವಿಡ್ ವಾರ್ನರ್ (20) ಔಟಾದರು.ಆ ಬಳಿಕ ಜೊತೆಗೂಡಿದ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದರು. 17 ಎಸೆತಗಳನ್ನು ಎದುರಿಸಿದ ಹೆಡ್ 2 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 34 ರನ್ ಬಾರಿಸಿದರೆ, ಮಿಚೆಲ್ ಮಾರ್ಷ್ 9 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 18 ರನ್ ಸಿಡಿಸಿದರು.
ನಮೀಬಿಯಾ ಪರ ಡೇವಿಡ್ ಒಂದು ವಿಕೆಟ್ ಪಡೆದರು.
ನಮೀಬಿಯಾ ಪರವಾಗಿ ನಾಯಕ ಎರಸ್ಮಾಸ್ 36 ರನ್ ಹೊಡೆದು ಗಮನ ಸೆಳೆದರು.ಮಾರಕ ದಾಳಿ ನಡೆಸಿದ ಆಸ್ಟ್ರೇಲಿಯಾದ ಜಂಪಾ 4 ವಿಕೆಟ್, ಹಾಜೆಲ್ವುಡ್, ಸ್ಟೊಯಿನ್ಸ್ ತಲಾ 2 ವಿಕೆಟ್ ಪಡೆದರು.