ಸುಳ್ಯ:ಮಂಥನ ವೇದಿಕೆ ಸುಳ್ಯ ವತಿಯಿಂದ ‘ಸಿಂದೂರ ವಿಜಯ ಭಾರತದತ್ತ ವಿಶ್ವದ ಚಿತ್ತ’ ರಾಷ್ಟ್ರೀಯ ವಿಚಾರಗಳ ಸಂವಾದ ಕಾರ್ಯಕ್ರನ ಆಗಸ್ಟ್ 2 ಶನಿವಾರ ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸಿಂಧೂರ ವಿಜಯದಿಂದ ಇದೀಗ ವಿಶ್ವವೇ ಭಾರತದತ್ತ
ತಿರುಗಿ ನೋಡುವಂತಾಗಿದೆ. ಸಿಂಧೂರ ವಿಜಯ ಒಂದು ಐತಿಹಾಸಿಕ ಗೆಲುವು. ವಿಶ್ವದ ನಾನಾ ರಾಷ್ಟ್ರಗಳಲ್ಲಿ ಭಾರತದ ಐತಿಹಾಸಿಕ ಗೆಲುವಿನ ಕುರಿತು ಸಂವಾದ ನಡೆಸಿದ ತಂಡದ ಸದಸ್ಯರಾದ ನಿವೃತ್ತ ಕ್ಯಾಪ್ಟನ್ ದ.ಕ.ಸಂಸದ ಬೃಜೇಶ್ ಚೌಟ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಕೀಲರು , ವೈದ್ಯರು , ಉಪನ್ಯಾಸಕರು ಹಾಗೂ ಶಿಕ್ಷಕರು ಮತ್ತು ಚಿಂತಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಈ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿಗೆ ನಮನ ಸಲ್ಲಿಸಿ ಬಳಿಕ ಸಿಂಧೂರ ಹೋರಾಟದ ವಿಡಿಯೋ ತುಣುಕು ಪ್ರದರ್ಶನ ನಡೆಯಲಿದೆ ಎಂದು ಮಂಥನ ವೇದಿಕೆಯ ಸಂಚಾಲಕರಾದ ಪ್ರದ್ಯುಮ್ನ ಉಬರಡ್ಕ ತಿಳಿಸಿದ್ದಾರೆ.














