ಸುಳ್ಯ:ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಜನಸಂಘದ ಸ್ಥಾಪಕರಾದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನಾಚರಣೆ ಬಿಜೆಪಿ ಕಚೇರಿಯಲ್ಲಿ ನಡೆಯಿತು.ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಂಸ್ಮರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ
ಎಸ್ಐಆರ್ ಸುಳ್ಯ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಮಾತನಾಡಿ ಮುಖರ್ಜಿ ಅವರ ಸಾಧನೆಗಳು,ಜೀವನ ಶೈಲಿ, ಸಾರ್ಥಕತೆಯ ಸಮಾಜ ಸೇವೆ ಮತ್ತು ಅವರ ರಾಜಕೀಯ ಜೀವನದ ವಿಚಾರಗಳನ್ನು ತಿಳಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ರೈ ಮನವಳಿಕೆ, ವಿನಯ್ ಕುಮಾರ್ ಕಂದಡ್ಕ, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ ಮಾಜಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ,
ನಾರಾಯಣ ಎಸ್.ಎಂ,ಶಿವನಾಥ ರಾವ್, ಜಿನ್ನಪ್ಪ ಪೂಜಾರಿ, ಅಶೋಕ್ ಅಡ್ಕಾರ್,ಗಿರೀಶ್ ಕಲ್ಲುಗದ್ದೆ, ಸುಧಾಕರ ಕುರುಂಜಿಗುಡ್ಡೆ,ಶಶಿಕಲಾ ನೀರಬಿದಿರೆ,ಬುದ್ದ ನಾಯ್ಕ್,ಬೂಡು ರಾಧಾಕೃಷ್ಣ, ಸೋಮನಾಥ ಪೂಜಾರಿ ಉಪಸ್ಥಿತರಿದ್ದರು.






