ಸುಳ್ಯ:ಸ್ವಯಂ ಚಾಲಿತ ಹವಾಮಾನ ಕೇಂದ್ರಗಳ ಹಾಗು ಮಳೆ ಮಾಪನ ಕೇಂದ್ರಗಳ ಮೇಲ್ವಿಚಾರಣೆ ಸಮಿತಿ ಸಭೆ ತಹಶೀಲ್ದಾರ್ ಮಂಜುಳ ಎಂ.ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ಗಳಲ್ಲಿರುವ ಮಳೆ ಮಾಪನಗಳನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗು ಗ್ರಾಮ ಆಡಳಿತಾಧಿಕಾರಿಗಳು ಪರಿಶೀಲನೆ ನಡೆಸಬೇಕು, ಮಾಪನಗಳನ್ನು
ಸೂಕ್ತ ಸ್ಥಳದಲ್ಲಿ ಇರಿಸಬೇಕು ಮಳೆ ನೀರು ಬೀಳಲು ಸೂಕ್ತ ಸ್ಥಳದಲ್ಲಿ ಮಾಪನ ಇರಿಸಬೇಕು, ಮಳೆ ನೀರು ಬೀಳಲು ಯಾವುದೇ ಅಡೆ ತಡೆ ಇಲ್ಲದಂತೆ ಮಾಪನವನ್ನು ಇರಿಸಬೇಕು ಎಂದು ತಹಶೀಲ್ದಾರ್ ಸೂಚನೆ ನೀಡಿದರು. ಸೂಕ್ತವಾದ ಸ್ಥಳದಲ್ಲಿ ಇಲ್ಲದಿದ್ದರೆ ಅದನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು. ಮಾಪನ ಅಳವಡಿಸಿದ ಕಂಪೆನಿಯವರು ಮಾಪನವನ್ನು ಪರಿಶೀಲಿಸಿ ತಾಂತ್ರಿಕವಾಗಿ ಸರಿ ಇದೆ ಎಂದು ಖಾತ್ರಿಪಡಿಸಬೇಕು ಎಂದು ಸಭೆಯಲ್ಲಿ

ಅಭಿಪ್ರಾಯ ವ್ಯಕ್ತವಾಯಿತು. ತಾಲೂಕಿನ ವಿವಿಧ ಕಡೆಗಳಲ್ಲಿ ಮಾಪನ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ಕಂಪೆನಿಯವರು ಬಂದು ಪರಿಶೀಲನೆ ನಡೆಸಿ ತಾಂತ್ರಿಕವಾಗಿ ಸರಿಪಡಿಸಲು ಸೂಚಿಸಲು ನಿರ್ಧರಿಸಲಾಯಿತು. ಕಂಪೆನಿಯವರು ಖಡ್ಡಾಯವಾಗಿ ಆಗಮಿಸಿ ಮಾಪನಗಳನ್ನು ಪರಿಶೀಲಿಸಿ ಸರಿಪಡಿಸಬೇಕು ಎಂದು ಸೂಚಿಸಲಾಯಿತು. ಪ್ರತಿ ದಿನದ ಮಳೆ ದಾಖಲೆಯನ್ನು ಇಲಾಖೆಗಳು ಪಂಚಾಯತ್ಗಳಿಗೆ ನೀಡಬೇಕು. ಪ್ರತಿ ವಾರ ಮಾಪನ ಸರಿಯಾಗಿ ಇದೆಯಾ ಎಂದು ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ತಹಶೀಲ್ದಾರ್ ಸೂಚಿಸಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್.ಸಿ.ಎಂ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗವೇದಿಕೆಯಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಪೂಜೇರಿ ಸ್ವಾಗತಿಸಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಹಾನ ವಂದಿಸಿದರು. ವಿವಿಧ ಪಂಚಾಯತ್ಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.






