ಸುಳ್ಯ:ಸುಳ್ಯ ಮಂಡಲದ ಕಾನೂನು ಪ್ರಕೋಷ್ಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸುಳ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು.ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ,
ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಟದ
ಸಂಚಾಲಕ ಶ್ರೀಧರ ಶೆಟ್ಟಿ ಪುಳಿಂಚ, ಸಹಸಂಚಾಲಕ ಪ್ರಮೋದ್ ಪೂಜಾರಿ ಕೆರ್ವಾಶೆ ಮಾತನಾಡಿದರು. ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ವಿನಯ ಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಕಾನೂನು ಪ್ರಕೋಷ್ಟದ ಸುಳ್ಯ ಮಂಡಲದ ಸಂಚಾಲಕ ಮಹೇಶ್ ಕೆ ಸವಣೂರು, ದಕ್ಷಿಣ ಕನ್ನಡ ಜಿಲ್ಲಾ ವಕ್ತರರಾದ ವಿನಯ ಕುಮಾರ್ ಮುಳುಗಾಡು, ಜಿಲ್ಲಾ ಕಾರ್ಯದರ್ಶಿ ಪುಷ್ಪ ಮೇದಪ್ಪ, ಕಾನೂನು ಪ್ರಕೋಷ್ಟ ಜಿಲ್ಲಾ ಸದಸ್ಯರಾದ ವೇಣುಕುಮಾರ್, ಜಿಲ್ಲಾ ಕಾನೂನು ಪ್ರಕೋಷ್ಟದ ಸುಳ್ಯ ಪ್ರಭಾರಿ ಸಂದೀಪ್ ವಳಲಂಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾದ ಹರೀಶ್ ಬೂಡುಪನ್ನೆ, ಹರೀಶ್ ಕುಮಾರ್ ಎನ್ ಬೂಡಿಯಾರು, ವಿನೋದ್ ಕುಮಾರ್ ನೆಲ್ಯಾಡಿ, ಹರ್ಷಿತ್ ಕಾರ್ಜ, ಕುಮಾರಿ ಶೈಲಿ ಅವನ್ನು ಶಾಲು ನೀಡಿ ಸ್ವಾಗತಿಸಲಾಯಿತು. ಸುಳ್ಯ ಮಂಡಲ ಉಪಾಧ್ಯಕ್ಷರಾದ ಶಿವಾನಂದ ಕುಕ್ಕಂಬಳ , ಜಯರಾಜ್ ಕುಕ್ಕೆಟ್ಟಿ, ಕಾರ್ಯದರ್ಶಿಗಳಾದ ಗಣೇಶ್ ಉದನಡ್ಕ, ನಿರಂಜನ ಬೋಳುಬೈಲು, ಭಾರತಿ ಪುರುಷೋತ್ತಮ, ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ, ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ ಕೆ, ಪ್ರಧಾನ ಕಾರ್ಯದರ್ಶಿ ಶಶಿಕಲಾ ನೀರಬಿದಿರೆ, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ರೈ ಮೈಲೇರಿ, ಎಸ್.ಟಿ ಮೋರ್ಚಾದ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಕಾರ್ಯದರ್ಶಿ ಬಾಲಕೃಷ್ಣ, ಯುವ ಮೋರ್ಚಾದ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರಧಾನ ಕಾರ್ಯುದರ್ಶಿ ದಿವಾಕರ ಆರ್, ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಜಯನಗರ, ಮಂಡಲ ಸದಸ್ಯರಾದ ತಾರನಾಥ ಕಾಯಾರ್ಗ, ಕುಟ್ರುಪಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ದೇಂತಾರು, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅನೂಪ್ ರಾವ್ ಕೆ, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಅನೂಪ್ ಬಿಳಿನೆಲೆ, ಚಂದ್ರಾವತಿ ಸುಣ್ಣಾಜೆ, ಸವಣೂರು ಶಕ್ತಿಕೇಂದ್ರದ ಪ್ರಮುಖ್ ಚೇತನ್ ಕುಮಾರ್ ಕೋಡಿಬೈಲು, ಕೃಷಿಕ ಸಮಾಜದ ಕಡಬ ಇದರ ನಿರ್ದೇಶಕರಾದ ರಾಜರಾಮ್ ಪ್ರಭು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸುಳ್ಯ ಮಂಡಲದ ಕಾನೂನು ಪ್ರಕೋಷ್ಟದ ಸಂಚಾಲಕ ಮಹೇಶ್ ಕೆ ಸವಣೂರು ಸ್ವಾಗತಿಸಿ, ಸಹ ಸಂಚಾಲಕರಾದ ಸಂದೀಪ್ ಮದುವೆಗದ್ದೆ ಕಾರ್ಯಕ್ರಮ ನಿರೂಪಿಸಿ ಸದಸ್ಯರಾದ ಹರ್ಷಿತ್ ಕಾರ್ಜ ವಂದಿಸಿದರು.








