ಸಂಪಾಜೆ:ಸಂಪಾಜೆ ಗ್ರಾಮ ಕಾಂಗ್ರೆಸ್ ಸಮಿತಿ ಸಭೆ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.ಯುವ ಕಾಂಗ್ರೆಸ್ ಸಮಿತಿಯನ್ನು ಗಟ್ಟಿಗೊಳಿಸಿ ತುರ್ತು ಸಂದರ್ಭದಲ್ಲಿ
ಪ್ರಾಕೃತಿಕ ವಿಕೋಪ, ಅಪಘಾತ ಇನ್ನಿತರ ಸಂದರ್ಭಗಳಲ್ಲಿ ನೆರವಾಗುವ ದೃಷ್ಟಿಯಿಂದ 50 ಜನ ಯುವಕರ ಬ್ರಿಗೇಡ್ ರಚನೆ ಮಾಡಲು ನಿರ್ಧರಿಸಲಾಯಿತು.ಗ್ರಾಮ ಪಂಚಾಯತಿ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಪ್ರಯತ್ನಿಸಲು,ಚರಂಡಿ ಕಾಮಗಾರಿ, ರಸ್ತೆಗೆ ಬಾಗಿದ ಪೊದೆ ತೆರವು,ಬೀದಿ ದೀಪ ದುರಸ್ತಿಗೆ ಗ್ರಾಮ ಪಂಚಾಯಿತಿಯ ಗಮನಕ್ಕೆ ತರಲು ನಿರ್ಧರಿಸಲಾಯಿತು. ಸಭೆಯಲ್ಲಿ ಪ್ರಮುಖರಾದ ಜಿ.ಕೆ.ಹಮೀದ್, ಎಸ್.ಕೆ.ಹನೀಫ, ದೀಕ್ಷಿತ್ ದೊಡ್ಡಡ್ಕ, ವಿಮಲಾ ಪ್ರಸಾದ್, ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.












