ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆಗೆ ಸುಳ್ಯದಲ್ಲಿ ಅಭಿಪ್ರಾಯ ಸಂಗ್ರಹ ನಡೆಯುತ್ತಿದ್ದು ಜಿಲ್ಲಾಧ್ಯಕ್ಷತೆಗೆ ಸುಳ್ಯದಿಂದ ಇಂದು ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಹಾಗು
ಕಾಂಗ್ರೆಸ್ ಸಾಮಾಜಿಕ ಜಾಲ ತಾಣದ ಪ್ರಮುಖರಾದ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಅರ್ಜಿ ಸಲ್ಲಿಸಿದ್ದಾರೆ.
ಎಐಸಿಸಿ ನಿಯೋಜಿಸಿದ ವೀಕ್ಷಕರಾದ ಕ್ಯಾಲಿಕಟ್ ನಾರ್ತ್ ಕ್ಷೇತ್ರದ ಶಾಸಕ ಕೆ.ಜಯಂತ್ ಅವರ ನೇತೃತ್ವದ ತಂಡ ಆ.9ರಂದು ಸುಳ್ಯಕ್ಕೆ ಆಗಮಿಸಿ

ಸದಾನಂದ ಮಾವಜಿ
ಸುಳ್ಯದ ಸದರ್ನ್ ರೆಸಿಡೆನ್ಸಿ ಸಭಾಂಗಣದಲ್ಲಿ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಸದಾನಂದ ಮಾವಜಿ ಹಾಗು ಸಚಿನ್ ರಾಜ್ ಶೆಟ್ಟಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸುಳ್ಯದಿಂದ ಎಂ.ವೆಂಕಪ್ಪ ಗೌಡ ಹಾಗು ಕಿರಣ್ ಬುಡ್ಲೆಗುತ್ತು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಸಚಿನ್ ರಾಜ್ ಶೆಟ್ಟಿ ಅರ್ಜಿ ಸಲ್ಲಿಕೆ











