ಸುಳ್ಯ:ಸಾಮರಸ್ಯದ ಸಮಾಜವನ್ನು ಕಟ್ಟಲು ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲು ಸರಕಾರ ನಿರ್ಧರಿಸಿದೆ. ಯುವಕ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ 16ರಿಂದ 35 ವರ್ಷದವರೆಗಿನ
ಯುವಕ ಯುವತಿಯರು ಸಂಘದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಗ್ರಾಮ ಮಟ್ಟದಲ್ಲಿ 4 ಸಾವಿರ ಮಂದಿಗೆ ಒಂದು ತಂಡ, ಪಟ್ಟಣ ಪಂಚಾಯತ್ ಮಟ್ಟದಲ್ಲಿ 6 ಸಾವಿರ ಮಂದಿಗೆ ಒಂದು ತಂಡ ಎಂಬಂತೆ ರಚಿಸಬಹುದು. ತಂಡದಲ್ಲಿ ಕನಿಷ್ಠ 100 ಮಂದಿ ನೋಂದಣಿ ಮಾಡಿಕೊಳ್ಳಬೇಕು. ಅಧ್ಯಕ್ಷರು ಸೇರಿ 15 ಮಂದಿ ಕಾರ್ಯಕಾರಿ ಸಮಿತಿ ರಚಿಸಲಾಗುವುದು. ಸಂಘದ ಚಟುವಟಿಕೆಗಳಿಗೆ ಸರಕಾರ ವಾರ್ಷಿಕ 10 ಲಕ್ಷ ರೂ ಅನುದಾನ ನೀಡಲಿದೆ. ಒಬ್ಬ ತರಬೇತುದಾರರನ್ನು ನೇಮಕ ಮಾಡಲಿದೆ.
ಕ್ರೀಡೆ, ಆರೋಗ್ಯ ಸ್ವಾಸ್ಥ್ಯ, ಸಮುದಾಯದ ಅಭಿವೃದ್ಧಿ, ರಾಷ್ಟ್ರೀಯ ಹಬ್ಬಗಳ ಆಚರಣೆ,ಸಾಮಾಜಿಕ ಸಾಮರಷ್ಯದ ಕಾರ್ಯಕ್ರಮ, ವಿಪತ್ತು ನಿರ್ವಹಣೆ,ಸೈಬರ್ ಜಾಗೃತಿ, ರಕ್ತದಾನ ಸೇರಿದಂತೆ ಸಾಮರಷ್ಯದ ಸಮಾಜ ಕಟ್ಟುವ ಎಲ್ಲರನ್ನು ಜೋಡಿಸುವ ಕೆಲಸ

ಸಂಘಟನೆಯಿಂದ ಆಗಲಿದೆ. ಜಾತಿ, ಧರ್ಮ, ರಾಜಕೀಯ ಭೇದ ಇಲ್ಲದೆ ಎಲ್ಲಾ ಯುವಕ,ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿ ಕೊಳ್ಳುವ ಮೂಲಕ ಯುವಜನಾಂಗ ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ‘ ಸರಕಾರದ ಹೊಸ ವ್ಯವಸ್ಥೆ ಭಾರತ್ ಜೋಡೋ ಯುವ ಸಂಘಗಳು.ಇದು ಪ್ರತಿಯೊಬ್ಬರಿಗೂ ಮುಟ್ಟಬೇಕು.ಯುವಕರಿಗೆ ಗ್ರಾಮ ಕಟ್ಟುವ ಅವಕಾಶ. ಅತೀ ಹೆಚ್ಚು ಸಂಖ್ಯೆಯಲ್ಲಿ ಯುವಕ, ಯುವತಿಯರು ಸಂಘದಲ್ಲಿ ನೋಂದಾವಣೆ ಮಾಡಿಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಪ್ರಮುಖರಾದ ಶಶಿಧರ ಎಂ.ಜೆ, ಶ್ರೀಹರಿ ಕುಕ್ಕುಡೇಲು ಉಪಸ್ಥಿತರಿದ್ದರು.












