ಮಂಗಳೂರು:ಭಾರೀ ಮಳೆಯ ಸೂಚನೆಯ ಹಿನ್ನಲೆಯಲ್ಲಿ ಆ.4ರಂದು ಮಂಗಳವಸರ ದ.ಕ.ಜಿಲ್ಲೆಯ ಪುತ್ತೂರು ಉಪವಿಭಾಗದ ತಾಲೂಕುಗಳಾದ ಪುತ್ತೂರು, ಸುಳ್ಯ, ಕಡಬ,ಬೆಳ್ತಂಗಡಿ ತಾಲೂಕುಗಳಲ್ಲಿ ಅಂಗನವಾಡಿ ಕೇಂದ್ರ, ಸರಕಾರಿ, ಅನುದಾನಿತ ಮತ್ತು
ಖಾಸಗೀ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ, ಐಟಿಐ ಮತ್ತು ಡಿಪ್ಲೊಮಾ ಕಾಲೇಜುಗಳು 12 ನೇ ತರಗತಿವರೆಗೆ(ಎಲ್ಲಾ ವಸತಿ ಶಾಲಾ ಕಾಲೇಜು ಸೇರಿದಂತೆ) ರಜೆ ಘೋಷಿಸಲಾಗಿದೆ.
ಮಂಗಳೂರು ಉಪವಿಭಾಗದ ತಾಲೂಕುಗಳಾದ ಮಂಗಳೂರು, ಬಂಟ್ವಾಳ, ಮೂಡಬಿದ್ರೆ,ಮುಲ್ಕಿ, ಉಳ್ಳಾಳದ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ, ಅನುದಾನಿತ ಮತ್ತು ಖಾಸಗೀ ಪ್ರಾಥಮಿಕ, ಪ್ರೌಢ ಶಾಲೆಗಳು 10ನೇ ತರಗತಿವರೆಗೆ( ಎಲ್ಲಾ ವಸತಿ ಶಾಲೆಗಲು ಸೆರಿದಂತೆ)ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ.












