ಬೆಂಗಳೂರು:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ 19 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ನೂತನ ಸಚಿವರಿಗೆ ಅಧಿಕಾರ ಹಾಗೂ
ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.ಡಾ. ಅಜಯ್ ಧರ್ಮಸಿಂಗ್,ಎಚ್.ಸಿ. ಬಾಲಕೃಷ್ಣ,ಕೆ.ಎಸ್. ಬಸವಂತಪ್ಪ,ಬಸವರಾಜ್ ರಾಯರೆಡ್ಡಿ,ಎನ್. ಚಲುವರಾಯಸ್ವಾಮಿ,ಲಕ್ಷ್ಮಣ ಸವದಿ,ಮಧು ಬಂಗಾರಪ್ಪ,ಎಸ್.ಎಸ್.ಮಲ್ಲಿಕಾರ್ಜುನ,ಬಿ.ನಾಗೇಂದ್ರ, ಪಿ.ಎಂ. ನರೇಂದ್ರಸ್ವಾಮಿ, ಸಿ.ಪುಟ್ಟರಂಗಶೆಟ್ಟಿ,ಟಿ. ರಘುಮೂರ್ತಿ,ರಿಜ್ವಾನ್ ಅರ್ಷದ್,ರುದ್ರಪ್ಪ ಲಮಾಣಿ,ಸಂತೋಷ್ ಲಾಡ್,ಕೆ.ಎಂ.ಶಿವಲಿಂಗೇಗೌಡ,
ಶಿವರಾಜ್ ತಂಗಡಗಿ,ವಿಜಯಾನಂದ ಕಾಶಪ್ಪನವರ್, ಬಿ.ಜೆ. ಜಮೀರ್ ಅಹ್ಮದ್ ಖಾನ್ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರುಗಳು, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಹೈಕಮಾಂಡ್ ಘೋಷಿಸಿದ 20 ಸಚಿವರ ಪಟ್ಟಿಯಲ್ಲಿ ಗಾಯತ್ರಿ ಶಾಂತೇ ಗೌಡ ಹೆಸರಿದ್ದರೂ ಅವರು ಪ್ರಮಾಣ ವಚನ ಸ್ವೀಕರಿಸಲಿಲ್ಲ.ಕೊನೆ ಕ್ಷಣದ ರಾಜಕೀಯ ಬೆಳವಣಿಗೆಯಲ್ಲಿ ಈ ಬದಲಾವಣೆ ಆಗಿದೆ. ಅದೇ ರೀತಿ ಮೊದಲು ಘೋಷಿಸಿದ ಪಟ್ಟಿಯಲ್ಲಿ ಮಂಕಾಳ್ ವೈದ್ಯ ಅವರ ಹೆಸರು ಇತ್ತು. ಬಳಿಕ ಬದಲಿಸಿ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಅವಕಾಶ ನೀಡಲಾಗಿದೆ.












