ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 6 ವಿಕೆಟ್ ಅಂತರದ ಜಯ ಸಾಧಿಸಿತು.ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 175 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ
ಡೆಲ್ಲಿ, 19.5 ಓವರ್ಗಳಲ್ಲಿ 4 ವಿಕೆಟ್ಗೆ 195 ರನ್ ಬಾರಿಸಿ ಜಯದ ನಗೆ ಬೀರಿತು.ಗುರಿಯನ್ನು ಬೆನ್ನತ್ತಿದ ಡೆಲ್ಲಿ ಪಡೆಗೆ ಆರಂಭಿಕ ಹಂತದಲ್ಲೇ ಭುವನೇಶ್ವರ ಕುಮಾರ್ ಆಘಾತ ನೀಡಿದರು. 18 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿಗೆ ಕೆ.ಎಲ್. ರಾಹುಲ್ (57 ರನ್, 34 ಎಸೆತ) ಗೆಲುವಿನ ಭರವಸೆಯನ್ನು ನೀಡಿದರು. ನಂತರದಲ್ಲಿ ಟಿಸ್ಟನ್ ಸ್ಟಬ್ಸ್ (ಅಜೇಯ 60 ರನ್ 47 ಎಸೆತ), ಕ್ಯಾಪ್ಟನ್ ಅಕ್ಷರ್ ಪಟೇಲ್ (26 ರನ್, 19 ಎಸೆತ) ಮತ್ತು ಕೊನೆಯ ಓವರ್ನಲ್ಲಿ ಎರಡು ಸಿಕ್ಸರ್, ಒಂದು ಬೌಂಡರಿ ಬಾರಿಸಿದ ಡೇವಿಡ್ ಮಿಲ್ಲರ್ ಅವರ ಅಮೋಘ ಪ್ರದರ್ಶನ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ
ಪರ ಫಿಲ್ ಸಾಲ್ಟ್ (63 ರನ್, 38 ಎಸೆತ) ಉತ್ತಮ ಓಪನಿಂಗ್ ಪ್ರದರ್ಶನ ನೀಡಿದರು. ಆದರೆ, ಉಳಿದ ಯಾವೊಬ್ಬ ಬ್ಯಾಟರ್ನಿಂದಲೂ ಉತ್ತಮ ಇನ್ನಿಂಗ್ಸ್ ಬರಲಿಲ್ಲ. ಇದರಿಂದ ಆರ್ಸಿಬಿ ಸಾಧಾರಣ ಮೊತ್ತ ಗಳಿಸುವಂತಾಯಿತು. ಕೊನೆಯಲ್ಲಿ ರನ್ ರೇಟ್ ತೀರಾ ಕುಸಿಯಿತು. ಜಿತೇಶ್ ಶರ್ಮ 20 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿದರೆ, ರೊಮಾರಿಯೋ ಶೆಫರ್ಡ್, ಕ್ರುನಾಲ್ ಪಾಂಡ್ಯ ಬೇಗನೇ ಮರಳಿದರು.
















