ಸುಳ್ಯ: ವಿಶ್ವ ಹಿಂದು ಪರಿಷತ್, ಭಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ವತಿಯಿಂದ ಸಾರ್ವಜನಿಕ ಗೋಪೂಜೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಶ್ರೀ ಚೆನ್ನಕೇಶವ ದೇಗುಲದ ಮುಂಭಾಗದಲ್ಲಿ ಶನಿವಾರ ನಡೆಯಿತು. ಕುಣಿತ ಭಜನೆ ನಡೆದು ಬಳಿಕ ಗೋ ಪೂಜೆ ನೆರವೇರಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ ಉದ್ಘಾಟಿಸಿದರು. ವಿಶ್ವ ಹಿಂದು ಪರಿಷದ್ ಸುಳ್ಯ ನಗರ ಅಧ್ಯಕ್ಷ ಉಪೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಗೋಪೂಜೆ ಕುರಿತುಡಾ.ರವೀಶ್ ಪಡುಮಲೆ ಉಪನ್ಯಾಸ ನೀಡಿದರು. ಗಂಭೀರ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ

ಉದ್ಯಮಿ ಪ್ರಶಾಂತ್ , ಭಜರಂಗದಳ ಪುತ್ತೂರು ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ರೂಪೇಶ್ ಪೂಜಾರಿಮನೆ , ವಿಶ್ವ ಹಿಂದು ಪರಿಷದ್ ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ , ಭಜರಂಗದಳ ಸಹ ಸಂಚಾಲಕ ವರ್ಷಿತ್ ಚೊಕ್ಕಾಡಿ , ಭಜರಂಗದಳ ಗೋರಕ್ಷಾ ಪ್ರಮುಖ್ ವಿನಯ್ ಐವರ್ನಾಡು , ಬಜರಂಗಳ ಸುಳ್ಯ ನಗರ ಸಂಚಾಲಕ ರಾಜೇಶ್ ಕಲ್ಲುಮುಟ್ಲು ಉಪಸ್ಥಿತರಿದ್ದರು. ಶುಭಾ ಪ್ರಾರ್ಥಿಸಿ ರಾಜೇಶ್ ಕಲ್ಲುಮುಟ್ಲು ಸ್ವಾಗತಿಸಿ ತೀರ್ಥೇಶ್ ಯಾದವ್ ನಾರ್ಣಕಜೆ ಕಾರ್ಯಕ್ರಮ ನಿರೂಪಿಸಿದರು.















