ಸುಳ್ಯ:ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಆಹಾರ ಮೇಳ ಸ್ಪರ್ಧೆ ನಡೆಯಿತು. ಆಹಾರ ಮತ್ತು ಆರೋಗ್ಯ ಈ ವಿಷಯದ ಮೇಲೆ ವಿದ್ಯಾರ್ಥಿಗಳು ವಿವಿಧ ಖಾದ್ಯಗಳನ್ನು

ತಯಾರಿಸಿ ಪ್ರದರ್ಶಿಸಿದರು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ನಾಲ್ಕು ತಂಡಗಳು ಭಾಗವಹಿಸಿ, ರುಚಿ ಮತ್ತು ಶುಚಿಯಾದ ಆಹಾರವನ್ನು ತಯಾರಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದರು. ಈ ಸಂದರ್ಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿನಿ ಡಾ. ಶ್ವೇತಾ ಮಡಪ್ಪಾಡಿ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು .ಸಂಸ್ಥೆಯ ಪ್ರಾಂಶುಪಾಲರಾದ ದಯಾಮಣಿ ಕೆ ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
