ಪಂಜ:ಶ್ರೀಮುಖ ಪ್ರತಿಷ್ಠಾನ ಪಂಜ ಮತ್ತು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯ ಪಂಜ,ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ವನಿತಾ ಸಮಾಜ ಪಂಜ ಜಂಟಿಯಾಗಿ ಹಮ್ಮಿಕೊಂಡ
ಸಂಸ್ಕಾರ ಅಧ್ಯಯನ ಅ.25ರಂದು ಉದ್ಘಾಟನೆಗೊಂಡಿತು. ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಾಲಯದ ಪಾರ್ವತಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀಕೃಷ್ಣ ವೈಲಾಯ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು
ಶ್ರೀಮುಖ ಪ್ರತಿಷ್ಟಾನದ ಅಧ್ಯಕ್ಷ ಉದಯ ಶಂಕರ್ ಅಡ್ಕ ವಹಿಸಿದ್ಧರು.ವೇದಿಕೆಯಲ್ಲಿ ಶ್ರೀ ಸದಾಶಿವ ಪರಿವಾರ ಪಂಚ ಲಿಂಗೇಶ್ವರದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ವನಿತಾ ಸಮಾಜದ ಅಧ್ಯಕ್ಷೆ ಸುಮಾ ಕುದ್ವ, ಪಂಜ ಶಾರದಾಂಬ ಭಜನಾ ಮಂಡಳಿಯ ಅಧ್ಯಕ್ಷರಾದ ಬಾಲಕೃಷ್ಣ ಪುತ್ಯ ಹಾಗೂ ಶ್ರೀಮುಖ ಪ್ರತಿಷ್ಟಾನದ ಕಾರ್ಯದರ್ಶಿ ಸುವರ್ಣಿನಿ ಎನ್.ಎಸ್.ಉಪಸ್ಥಿತರಿದ್ದರು.
ಎನ್.ಎಸ್. ಸುವರ್ಣಿನಿ ಸ್ವಾಗತಿಸಿ, ವಂದಿಸಿದರು. ಸಂಸ್ಕಾರ ಅಧ್ಯಯನ ಶಿಬಿರ ಪ್ರತಿ ಆದಿತ್ಯವಾರ ಸಂಜೆ 3 ಗಂಟೆಯಿಂದ ನಡೆಯಲಿದೆ ಎಂದು ಶಿಬಿರದ ಪ್ರಾಚಾರ್ಯರಾದ ಡಾ. ವೆಂಕಟೇಶ ಮಂಜುಳಗಿರಿ
ತಿಳಿಸಿದ್ದಾರೆ.ನಿತ್ಯ ಪ್ರಾರ್ಥನಾ ಶ್ಲೋಕಗಳು, ಶಾಂತಿ ಮಂತ್ರಗಳು, ವಿಷ್ಣು ಸಹಸ್ರನಾಮ, ಶಿವಸಹಸ್ರನಾಮಾವಳಿ ಹಾಗೂ ತಿಳಿದಿರಬೇಕಾದ ಸಂಸ್ಕಾರಗಳನ್ನು ಕಲಿಸಲಾಗುತ್ತದೆ.
ಪ್ರತಿ ವಾರಕ್ಕೊಮ್ಮೆ ಒಂದುವರೆ ಗಂಟೆಗಳ ಕಾಲ ದೇವಾಲಯದ ವಠಾರದಲ್ಲಿ ಉಚಿತವಾಗಿ ತರಗತಿ ನಡೆಯಲಿದೆ.















