ಸಂಪಾಜೆ:ಸಂಪಾಜೆ ಬದ್ರ್ ಜುಮಾ ಮಸೀದಿಯಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಮದ್ರಸ ಮುಅಲ್ಲಿಂ ಆರಿಫ್ ಫೈಝಿ ಅಲ್ ಮಅ್ಬರಿ ದುಆ ನೆರವೇರಿಸಿದರು. ಜಮಾಅತ್ ಸಮಿತಿ ಅಧ್ಯಕ್ಷ ಮುಹಮ್ಮದ್ ಹಮೀದಿಯಾ ಧ್ವಜಾರೋಹಣ ನೆರವೇರಿಸಿದರು.ಸ್ಥಳೀಯ
ಖತೀಬ್ ಲುಖ್ಮಾನುಲ್ ಹಕೀಂ ಫೈಝಿ ಅಲ್ ಮಅ್ಬರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮದ್ರಸ ವಿದ್ಯಾರ್ಥಿಗಳಾದ ತಾಜುದ್ದೀನ್, ಸಿನಾನ್ ಮತ್ತು ನಿಹಾದ್ ದೇಶ ಭಕ್ತಿ ಗೀತೆ ಹಾಡಿದರು. ಕೋಶಾಧಿಕಾರಿ ಅಬ್ದುಲ್ ಖಾದರ್ ಎಸ್.ಪಿ., ಸ್ವಲಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಿ.ಪಿ., ಜಮಾಅತ್ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಹಮ್ಮದ್ ಹನೀಫ್ ಎಸ್.ಕೆ. ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.







































