ಗುತ್ತಿಗಾರು:ಭಾರತೀಯ ತೀಯ ಸಮಾಜ ಗುತ್ತಿಗಾರು ಮತ್ತು ಸುಬ್ರಮಣ್ಯ ಗ್ರಾಮ ಸಮಿತಿಗಳ ರಚನಾ ಸಭೆಯು ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಸುಳ್ಯ ವಲಯ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಕೇಪುಳಕಜೆ ಇವರ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ವಲಯ ಸಮಿತಿ ಕೋಶಾಧಿಕಾರಿ ಪ್ರದೀಪ್ ಅರಂತೋಡು, ಜತೆ ಕಾರ್ಯದರ್ಶಿ ದಯಾನಂದ ವಿನೋಬನಗರ, ವಲಯ ಸಮಿತಿ ಸದಸ್ಯರಾದ
ಜಯಪ್ರಕಾಶ್ ಅರಂಬೂರು, ವಿಜಯಲಕ್ಷ್ಮಿ ಬೀರಮಂಗಲ, ಮುಖ್ಯ ಅತಿಥಿಗಳಾಗಿ ಅನಿಲ್ ಕುಮಾರ್ ಗುತ್ತಿಗಾರು, ಪಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ನಾರಾಯಣ ಪಂಜ, ಗ್ರಾಮ ಪಂಚಾಯತ್ ಗುತ್ತಿಗಾರು ಇದರ ಮಾಜಿ ಅಧ್ಯಕ್ಷೆ ರೇವತಿ ಗುತ್ತಿಗಾರು, ಗುತ್ತಿಗಾರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್ ಉಪಸ್ಥಿತರಿದ್ದರು. ಸಭೆಯಲ್ಲಿ ವಲಯ ಸಮಿತಿಯ ಆಶ್ರಯದಲ್ಲಿ ನೂತನ ಗ್ರಾಮ ಸಮಿತಿಯನ್ನು

ಅನಿಲ್ ಕುಮಾರ್, ಕರುಣಾಕರ,ರೋಹಿಣಿ, ಗಿರೀಶ್, ಮೋಹನ್, ಪ್ರಣಮ್ಯ
ರಚಿಸಲಾಯಿತು.ಗುತ್ತಿಗಾರು ಗ್ರಾಮ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್ ಗುತ್ತಿಗಾರು,ಉಪಾಧ್ಯಕ್ಷರಾಗಿ ಮೂಕಾಂಬಿಕಾ ಗುತ್ತಿಗಾರು, ಕಾರ್ಯದರ್ಶಿಯಾಗಿ ರೋಹಿಣಿ ಮಾವಿನಕಟ್ಟೆ, ಕೋಶಾಧಿಕಾರಿಯಾಗಿ ಮೋಹನ್ ಆಯ್ಕೆಯಾದರು, ಸುಬ್ರಮಣ್ಯ ಗ್ರಾಮಸಮಿತಿಯ ಅಧ್ಯಕ್ಷರಾಗಿ ಕರುಣಾಕರ ಸುಬ್ರಮಣ್ಯ, ಉಪಾಧ್ಯಕ್ಷರಾಗಿ ಶಾಲಿನಿ ಗಡಿಕಲ್ಲು, ಕಾರ್ಯದರ್ಶಿಯಾಗಿ ಗಿರೀಶ್ ತಂಬಿನಡ್ಕ, ಕೋಶಾಧಿಕಾರಿಯಾಗಿ ಪ್ರಣಮ್ಯ ಸುಬ್ರಮಣ್ಯ ಆಯ್ಕೆಯಾದರು.ವಿಸ್ಕೃತ ಸಮಿತಿಯನ್ನು ಮುಂದಿನ ದಿನಗಳಲ್ಲಿ ಸಭೆ ಸೇರಿ ಆಯ್ಕೆ ಮಾಡುವುದಾಗಿ ತೀರ್ಮಾನಿಸಲಾಯಿತು. ಮೂಕಾಂಬಿಕಾ ಪ್ರಾರ್ಥಿಸಿ ಮೋಹನ್ ಗುತ್ತಿಗಾರು ಸ್ವಾಗತಿಸಿ, ಬಿಂದು ವಂದನಾರ್ಪಣೆಗೈದರು. ವಿಜಯಲಕ್ಷ್ಮಿ ಬೀರಮಂಗಲ ಕಾರ್ಯಕ್ರಮ ನಿರೂಪಿಸಿದರು.
































