ಐವರ್ನಾಡು:ಐವರ್ನಾಡು ಗ್ರಾಮದಲ್ಲಿ ಪವರ್ಮೆನ್ಗಳಿಲ್ಲದೆ ವಿದ್ಯುತ್ ಸಮಸ್ಯೆಯಾಗುತ್ತಿದ್ದು ಕೂಡಲೇ ಪವರ್ಮೆನ್ಗಳನ್ನು ಒದಗಿಸಿ ಕೊಡಬೇಕೆಂದು ಐವರ್ನಾಡಿನ ಗ್ರಾಮಸ್ಥರು ಮೆಸ್ಕಾಂ ಎ.ಇ.ಇ ಹರೀಶ್ ನಾಯ್ಕ್ ಅವರಿಗೆ ಮನವಿ ನೀಡಿದರು.ಒಂದು ವಾರದೊಳಗೆ ಪವರ್ಮೆನ್ಗಳನ್ನು ಒದಗಿಸುವುದಾಗಿ ಮತ್ತು
ಹಳೆಯ ವಯರ್ಗಳನ್ನು ಬದಲಾವಣೆ ಮಾಡಿ ಕೊಡುವುದಾಗಿ ಹಾಗೂ ವಾಹನದ ವ್ಯವಸ್ಥೆ,ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣದ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆ ಹರೀಶ್ ನಾಯ್ಕ್ ಭರವಸೆ ನೀಡಿದರು.ಐವರ್ನಾಡು ಗ್ರಾಮದಲ್ಲಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ ಮಾಡಲು ನಿವೇಶನ ಮಂಜೂರು ಮಾಡಬೇಕೆಂದು ಸುಳ್ಯ ತಹಶೀಲ್ದಾರ್ ಮಂಜುಳಾರವರಿಗೆ ಐವರ್ನಾಡಿನ ಗ್ರಾಮಸ್ಥರು ಮನವಿ ನೀಡಿದರು.
ಈ ಸಂದರ್ಭದಲ್ಲಿ
ಹಿರಿಯರಾದ ಮಾಧವ ಭಟ್ ಶೃಂಗೇರಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ, ಲೀಲಾವತಿ ಕುತ್ಯಾಡಿ,ಮಾಜಿ ಉಪಾಧ್ಯಕ್ಷರಾದ ಶಾಂತಾರಾಮ ಕಣಿಲೆಗುಂಡಿ,ಸುಜಾತ ಪವಿತ್ರಮಜಲು, ಮಾಜಿ ಸದಸ್ಯರಾದ ರಂಜನ್ ಮೂಲೆತೋಟ, ದೇವಿಪ್ರಸಾದ್ ಕೊಪ್ಪತ್ತಡ್ಕ, ಸಹಕಾರಿ ಸಂಘದ ನಿರ್ದೇಶಕರಾದ ಸತೀಶ್ ಎಡಮಲೆ,ಪುರಂದರ ಶಾಂತಿಮೂಲೆ,ಅನಂತ ಖಂಡಿಗೆಮೂಲೆ,ಗೋಪಾಲಕೃಷ್ಣ ಚೆಮ್ನೂರು, ಚಂದ್ರಕಾಂತ ಕೋಡ್ತೀಲು,ವಿನಯ ಕೋಡ್ತೀಲು, ತೀರ್ಥಪ್ರಸಾದ್,ಪ್ರಮೋದ್ ಪಾಲೆಪ್ಪಾಡಿ,ಹರೀಶ್ ಗುತ್ತಿಗಾರುಮೂಲೆ ಮತ್ತಿತರರು ಉಪಸ್ಥಿತರಿದ್ದರು.









