ಸುಳ್ಯ:ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಳ್ಯ ಕಚೇರಿ ಆವರಣದಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಎಪಿಎಂಸಿ ಮಾಜಿ ಸದಸ್ಯರಾದ ಆದಂ ಹಾಜಿ ಕಮ್ಮಾಡಿ ನೆರವೇರಿಸಿದರು. ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕೊತ್ತಮಟ್ಟೆ,ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಎಪಿಎಂಸಿ ಕಾರ್ಯದರ್ಶಿ ಎಸ್.ರವೀಂದ್ರ, ಜಿಲ್ಲಾ ವರ್ತಕ ಸಂಘದ ಕೋಶಾಧಿಕಾರಿ ಸಲೀಂ ಪೆರಂಗೋಡಿ, ತಾಲೂಕು ವರ್ತಕರ ಸಂಘದ ಕಾರ್ಯದರ್ಶಿ ಖಾದರ್ ಸಂಗಮ್,ಮಾಜಿ ನಗರ ಸಭಾ ಸದಸ್ಯ ಸಿದ್ದಿಕ್ ಕೊಕ್ಕೋ, ವರ್ತಕರಾದ ಫಕ್ರುದ್ದೀನ್, ದಿನೇಶ, ವಿಜಯ್ ಕುಮಾರ್, ದಯಾನಂದ ಶೆಟ್ಟಿ, ಹನೀಫ್, ಅಶ್ರಫ್ ಎಪಿಎಂಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post







































