ಪಂಜ:ಗರಡಿ ಕ್ರಿಕೆಟರ್ಸ್ ನಾಗತೀರ್ಥ ಇದರ ಆಶ್ರಯದಲ್ಲಿ ದೀಪಾವಳಿ ಕಪ್ ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪವನ್ ಪಲ್ಲತ್ತಡ್ಕ ಅವರನ್ನು ಸನ್ಮಾನಿಸಲಾಯಿತು. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಸನ್ಮಾನ ನೆರವೇರಿಸಿದರು.ಯುವಜನ ಸಂಯುಕ್ತ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ , ಕುಮಾರ್ ಕಕ್ಯಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಥಮ ಬಹುಮಾನವನ್ನು ಬಂಟಮಲೆ ಬಾಂಬರ್ಸ್ ಕಕ್ಯಾನ ,ದ್ವಿತೀಯ ಬಹುಮಾನವನ್ನು

ಡೇಂಜರ್ ಬಾಯ್ಸ್ ನಾಗತೀರ್ಥ ಗೆದ್ದುಕೊಂಡಿತು.ಫೈನಲ್ ಪಂದ್ದ ಪಂದ್ಯಶ್ರೇಷ್ಠ ಹಾಗೂ ಉತ್ತಮ ದಾಂಡಿಗ ಬಂಟಮಲೆ ಬಾಂಬರ್ಸ್ ತಂಡದ ನಿಖಿಲ್ ಕಕ್ಯಾನ , ಉತ್ತಮ ಬೌಲರ್ ಹುಡ್ ಬ್ರದರ್ಸ್ ತಂಡದ ಶರತ್ ಕುದ್ವ, ಡೇಂಜರ್ ಬಾಯ್ಸ್ ನಾಗತೀರ್ಥ ತಂಡದ ಯತೀಶ್ ನಾಗತೀರ್ಥ ಸರಣಿ ಶ್ರೇಷ್ಠ ಪಡೆದುಕೊಂಡರು.
ಮಕ್ಕಳ ಪಂದ್ಯಾಟದ ಪ್ರಥಮ ಬಹುಮಾನ ನಾಗತೀರ್ಥ ಕ್ರಿಕೆಟರ್ಸ್ ಹಾಗೂ ದ್ವಿತೀಯ ಬಹುಮಾನವನ್ನು ಅಟಲ್ ಜೀ ಕ್ರಿಕೆಟರ್ಸ್ ಕೂತ್ಕುಂಜ ಗೆದ್ದುಕೊಂಡಿತು.ರವಿ ಬಿ ನಾಗತೀರ್ಥ ಸ್ವಾಗತಿಸಿದರು. ಪುರಂದರ ಶೆಟ್ಟಿ ನಾಗತೀರ್ಥ ವಂದಿಸಿದರು.
































