ಸುಳ್ಯ:ಪುತ್ತೂರಿನ ಸುದಾನ ವಿದ್ಯಾ ಸಂಸ್ಥೆಯಲ್ಲಿ ನಡೆದ ಜಿಲ್ಲಾ ಮಟ್ಟದ ಟಿಸಿಎಸ್ ರೂರಲ್ ಐಟಿ ರಸಪ್ರಶ್ನೆಯಲ್ಲಿ ಅಜ್ಜಾವರ ಸರಕಾರಿ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥನಿ ನಿದಾ ಫಾತಿಮಾ ಭಾಗವಹಿಸಿ ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನ.2ರಂದು
ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ನಿದಾ ಫಾತಿಮಾ
ಭಾಗವಹಿಸಲಿದ್ದಾರೆ.ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯ 178 ವಿದ್ಯಾರ್ಥಿಗಳು ಭಾಗವಹಿಸಿದ್ದು 50 ವಿದ್ಯಾರ್ಥಿಗಳು ಮೂರನೇ ಸುತ್ತಿಗೆ ಆಯ್ಕೆ ಆಗಿದ್ದಾರೆ.ನಿದಾ ಫಾತಿಮ ಅಜ್ಜಾವರ ಮೇನಾಲದ ಲತೀಫ್ ಜೆ.ಇ- ರಾಫಿದಾ ದಂಪತಿಗಳ ಪುತ್ರಿ.









