ಗೂನಡ್ಕ: ಬದ್ರಿಯಾ ಜುಮ್ಮಾ ಮಸೀದಿ ವಠಾರದ ಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸ್ಥಳೀಯ
ಖತೀಬರಾದ ಅಶ್ರಫ್ ಸಖಾಫಿ ಅಲ್ ಮಳ್ಹರಿ ಮಾತನಾಡಿದರು.ವೇದಿಕೆಯಲ್ಲಿ ಜಮಾಅತ್ ಹಾಗೂ ವಿವಿಧ ಸಂಘಟನೆಗಳ ಪ್ರಮುಖರಾದ ಉಮ್ಮರ್ ಪುತ್ರಿ,ಜಿ. ಎಂ. ಅಬ್ದುಲ್ಲಾ,
ಡಿ. ಆರ್. ಅಬ್ದುಲ್ ಖಾದರ್ ಹಾಜಿ ಪಿ. ಎ. ಅಬ್ದುಲ್ಲಾ
ಇಬ್ರಾಹಿಂ ಗೂನಡ್ಕ,ಹಾಜಿ ಜಿ ಅಬ್ಬಾಸ್, ಮದ್ರಸಾ ವಿದ್ಯಾರ್ಥಿಗಳು, ವಿವಿಧ ಸುನ್ನಿ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.ಜಮಾಅತ್ ಕಾರ್ಯದರ್ಶಿ ಅಝರ್ ಚೇರೂರ್ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಅಶ್ರಪ್ ಎಸ್ ಎ ವಂದಿಸಿದರು.







































