ಸುಳ್ಯ: ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಫೆ.15ರಂದು ಬೆಳಿಗ್ಗೆ 9:30 ರಿಂದ ಸಾಯಂಕಾಲ 5:30ರ ತನಕ ಬೆಂಗಳೂರಿನ ಫಾರ್ಚುನ್ ಸೆಲೆಕ್ಟ್ ಟ್ರಿನಿಟಿ ಹೋಟೆಲ್ ನಲ್ಲಿ ನಡೆಯುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಜ್ಜನ ಕನ್ನಡ ನಾಡು-ನುಡಿ ವಿಭಾಗದ ರಾಜ್ಯ ಸಂಚಾಲಕರಾದ ಅಡ್ವಕೇಟ್ ಮಂಜುನಾಥ್ ಬಿ ಮತ್ತು ಸಜ್ಜನ ಕನ್ನಡ ನಾಡು-ನುಡಿ ಸಹ ಸಂಚಾಲಕರಾದ ವಾಸು ಎಂ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಸ್ಥಾಪಕಾಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ, ಇನೋವಿ ಮೋಬಿಲಿಟಿ ಸೊಲ್ಯೂಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಅಧಿಕಾರಿ ಚಾಂದಿನಿ, ವಿನೋದ್ ಮತ್ತು ಸಜ್ಜನ ಪ್ರತಿಷ್ಠಾನ ನಿರ್ದೇಶಕರಾದ ಮಂಜುನಾಥ್ ಹಿರಿಯೂರು ಉಪಸ್ಥಿತರಿದ್ದರು.’ಸಂಸ್ಥೆಯಲ್ಲಿ ಉತ್ತಮ ಸಂಸ್ಕೃತಿಯನ್ನು ನಿರ್ಮಿಸುವುದು ಎಂಬ ವಿಷಯದ ಬಗ್ಗೆ ತರಬೇತಿಯನ್ನು ಯೂನಿಕ್ ಕನ್ಸಲ್ಟೆಂಟ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವತ್ ರಾಮಯ್ಯ ಅವರು ನಡೆಸಿಕೊಡಲಿದ್ದಾರೆ. ಅವರು ದೇಶ ವಿದೇಶಗಳಲ್ಲಿ ತರಬೇತಿ ನಡೆಸಿ ಸುಮಾರು ಐದು ಲಕ್ಷಕ್ಕೂ ಅಧಿಕ ಜನರನ್ನು ತರಬೇತಿಗೊಳಿಸಿದ ಜನಪ್ರಿಯ ತರಬೇತುದಾರರಾಗಿದ್ದಾರೆ. .
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಸ್ಮೋಸ್ ಹೆಟ್ ಟೆಕ್ನಾಲಜಿಸ್ ಲಿಮಿಟೆಡ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ರಾಜಶೇಖರ್ ರೈ ನೆರವೇರಿಸಲಿದ್ದಾರೆ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಸ್ಥಾಪಕಾಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಯಸ್ಸಲ್ಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಸಾಹಿತಿಗಳು ಆದ ಹೊ. ರಾ. ಪರಮೇಶ್ವರ್ ಅವರು ರಚಿಸಿರುವ ಸಜ್ಜನ ಕನ್ನಡ ಕವಿಗಳು ಎಂಬ ಕೃತಿಯನ್ನು ಸಜ್ಜನ ಕನ್ನಡ ನಾಡು-ನುಡಿ ವಿಭಾಗದ ರಾಜ್ಯ ಸಂಚಾಲಕರಾದ ಅಡ್ವಕೇಟ್ ಮಂಜುನಾಥ ಬಿ ಲೋಕಾರ್ಪಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಲಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಅಕೌಂಟಿಂಗ್ ವಿಭಾಗದ ಹಿರಿಯ ನಿರ್ದೇಶಕರು ಸುಬ್ಬರಾಮು ಟಿ ವಿ, ಹಿರಿಯ ಮಾನವ ಸಂಪನ್ಮೂಲ ಅಧಿಕಾರಿಗಳು ಮತ್ತು ಸಲಹೆಗಾರರಾದ ದಿವ್ಯ, ಹಿರಿಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ಇಸ್ಮಾಯಿಲ್ ಝರಾ, ಇನೋವಿ ಮೋಬಿಲಿಟಿ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಎಚ್ಆರ್ ಮುಖ್ಯಸ್ಥರಾದ ವಾಸು ಎಂ, ಬುಕ್ಸ್ ಅಂಡ್ ಟ್ಯಾಕ್ಸ್ ಸರ್ವಿಸಸ್ ನ ಸಂಸ್ಥಾಪಕರಾದ ರವಿ ನಾರಾಯಣ, ಬೀಜದಕಟ್ಟೆ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ನಟರಾಜು ಬಿ, ಸರಿಟೋರಿಯಸ್ನ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಕಲಂದರ್ ಕೌಶಿಕ್, ಲಗುನ ಕ್ಲೋತಿಂಗ್ ಕಂಪನಿಯ ಎಚ್ಆರ್ ಮುಖ್ಯಸ್ಥರಾದ ಸದಾಶಿವ, ಹಿರಿಯ ಮಾಧ್ಯಮ ಸಲಹೆಗಾರರಾದ ಕೌಸರ್ ಜಬೀನ, ಬಯೋ ಪ್ಲಸ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಎಕ್ಸ್ಪೋರ್ಟ್ ಇಂಪೋರ್ಟ್ ಎಜಿಎಂ ರತ್ನಾಕರ ಕುಂದರ್, ನೀರಾವರಿ ಇಲಾಖೆ ಸಹಾಯಕ ಅಭಿಯಂತರರಾದ ತಾಜುದ್ದೀನ್ ಉಬೈದ್, ಒಸ್ಪ್ರೆ ಸೆಕ್ಯೂರಿಟಿ ಸಲ್ಯೂಷನ್ ನ ವ್ಯವಸ್ಥಾಪಕ ನಿರ್ದೇಶಕರಾದ ಬಿ ಬಿ ಪಾಟೀಲ್ ಹಾಗೂ ಟಿಸಿಎಸ್ನ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕರಾದ ಶ್ರೀವಿದ್ಯಾ ಪಾಲ್ಗೊಳ್ಳಲಿರುವರೆಂದು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಕಾರ್ಯಕ್ರಮ ಸಂಯೋಜಕರಾದ ಶಶಿಕಾಂತ್ ಬೆಡಸೂರು ತಿಳಿಸಿದ್ದಾರೆ.