ಸುಳ್ಯ:ಕೆಲಸದ ಒತ್ತಡದ ಮಧ್ಯೆ, ಬದಲಾದ ಜೀವನಶೈಲಿಯಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ ಮುಂಭಾಗದಲ್ಲಿ ನಿರ್ಮಾಣ ಮಾಡಿದ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟಿಸಿ ಅವರು ಹೇಳಿದರು. ಶಾಸಕಿ ಭಾಗೀರಥಿ ಮುರುಳ್ಯ ಶಟಲ್ ಕೋರ್ಟ್ನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ
ನ.ಪಂ. ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ ಯವರು ಶಟಲ್ ಆಡುವ ಮೂಲಕ ಚಾಲನೆ ನೀಡಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ್, ಸದಸ್ಯರಾದ ವಿನಯಕುಮಾರ್ ಕಂದಡ್ಕ, ಶೀಲಾ ಅರುಣ ಕುರುಂಜಿ, ಉಮ್ಮರ್ ಕೆ.ಎಸ್., ಶರೀಫ್ ಕಂಠಿ, ರಾಜು ಪಂಡಿತ್, ಸುಧಾಕರ ಕುರುಂಜಿಭಾಗ್ ಮುಖ್ಯ ಅತಿಥಿಗಳಾಗಿದ್ದರು.

ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ, ಕೋಶಾಧಿಕಾರಿ ರಮೇಶ್ ನೀರಬಿದಿರೆ, ಗಂಗಾಧರ ಮಟ್ಟಿ, ಶಿವಪ್ರಸಾದ್ ಕೇರ್ಪಳ, ಯಶ್ವಿತ್ ಕಾಳಮ್ಮನೆ, ಶಿವಪ್ರಸಾದ್ ಆಲೆಟ್ಟಿ, ಭಾಗೀಶ್ ಕೆ.ಟಿ., ಹಸೈನಾರ್ ಜಯನಗರ, ದಯಾನಂದ ಕೊರತ್ತೋಡಿ, ಜೆ.ಕೆ.ರೈ, ಪುಷ್ಪರಾಜ್ ಶೆಟ್ಟಿ, ಜಯಶ್ರೀ ಕೊಯಿಂಗೋಡಿ, ಪೂಜಾಶ್ರೀ ವಿತೇಶ್, ಪ್ರಜ್ಞಾ ಎಸ್.ನಾರಾಯಣ್ ಇದ್ದರು. ಪ್ರೆಸ್ಬ ಕ್ಲಬ್ ನಿರ್ದೇಶಕರಾದ
ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.