ಸುಳ್ಯ:ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ರೈಟು ಟು ಲೀವ್ ವತಿಯಿಂದ ಸ್ಮಾರ್ಟ್ ಬೋರ್ಡ್ ಕೊಡುಗೆ ನೀಡಲಾಯಿತು. ಸಂಸ್ಥೆಯ ನಿರ್ದೇಶಕ ರಮೇಶ್ ಅವರು ಸ್ಮಾರ್ಟ್ ಬೋರ್ಡ್ ಹಸ್ತಾಂತರ ಮಾಡಿದರು. ರೈಟ್ ಟು ಲೀವ್ ಸಂಸ್ಥೆಯು ರಾಜ್ಯದಾದ್ಯಂತ ಸುಮಾರು 200 ಶಾಲೆಗಳಿಗೆ ವಿವಿಧ
ಕೊಡುಗೆಗಳನ್ನು ನೀಡಿದೆ. ಆದರೆ ಇಂತಹ ಕೊಡುಗೆಗಳನ್ನು ಅತ್ಯಂತ ಸಮರ್ಪಕವಾಗಿ ಉಪಯೋಗಿಸುವಂತಾಗಲಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ “ರೈಟ್ ಟು ಲೀವ್ ಸಂಸ್ಥೆಯು ಸಮಾಜಕ್ಕೆ ಸಹಾಯ ಮಾಡುವುದರ ಜೊತೆಗೆ ಸಂಪನ್ಮೂಲದ ಹಂಚಿಕೆಯ ಕಾರ್ಯ ಮಾಡುತ್ತಿದೆ. ಸ್ನೇಹ ಶಾಲಾ ಆವರಣದಲ್ಲಿ ಕಂಪ್ಯೂಟರ್ ತರಗತಿ ನಡೆಸುವುದರ ಜೊತೆಗೆ, ಶಾಲಾ ವಿದ್ಯಾರ್ಥಿಗಳಿಗಾಗಿ ಟಿಂಕರಿಂಗ್ ಲ್ಯಾಬ್ ವ್ಯವಸ್ಥೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ, ಶಾಲಾ ಶಿಕ್ಷಕಿ ಪ್ರತಿಮಾಕುಮಾರಿ ಕೆ ಎಸ್ ವಂದಿಸಿದರು. ಶಿಕ್ಷಕಿ ಸವಿತಾ ಎಂ ನಿರೂಪಿಸಿದರು.