ಸುಳ್ಯ:ಮುಸಲ್ಮಾನ ಪವಿತ್ರ ಹಬ್ಬವಾದ ಈದುಲ್ ಫಿತರ್ ಹಬ್ಬದ ಪ್ರಯುಕ್ತ ಈದ್ ಸುನ್ನ ತಂಡದಿಂದ ಈದ್ ಸೌಹಾರ್ದ ಭೇಟಿ ಕಾರ್ಯಕ್ರಮ ಮಾ.31 ರಂದು ಸುಳ್ಯದಲ್ಲಿ ನಡೆಯಿತು.ಸುಳ್ಯ ಸೈಂಟ್ ಬ್ರಿಜಿಡ್ಸ್ ಧರ್ಮಗುರುಗಳಾದ ಫಾ.ವಿಕ್ಟರ್ ಡಿಸೋಜ ಅವರನ್ನು ಭೇಟಿ ಮಾಡಲಾಯಿತು. ಪುರೋಹಿತ ನಾಗರಾಜ ಭಟ್ ಅವರ ಕೇಶವ ಕೃಪಾ ವೇದಪಾಠ ಶಾಲೆಗೆ

ಭೇಟಿ ನೀಡಿದರು. ಶ್ರೀದೇವಿ ನಾಗರಾಜ ಭಟ್ ಶುಭಹಾರೈಸಿದರು.
ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ,ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಪಿ.ಎಸ್.ಗಂಗಾಧರ , ಸುರೇಶ್ ಅಮೈ, ಮೊದಲಾದವರನ್ನು ಭೇಟಿ ನೀಡಿ ಈದ್ ಸುನ್ನ ತಂಡ ಶುಭಾಶಯ ವಿನಿಮಯ ಮಾಡಿದರು.
ತಂಡದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಉದ್ಯಮಿ ಎಂ ಕೆ ಬಿಲ್ಡರ್ಸ್ ನ ಅಬ್ದುಲ್ ಲತೀಫ್ ಎಂ ಕೆ, ಶರೀಫ್ ಜಟ್ಟಿಪಳ್ಳ ಮೊದಲಾದವರು ಇದ್ದರು.