ಸುಳ್ಯ:ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ 75ನೇ ಹುಟ್ಟು ಹಬ್ಬದ ಸಂಭ್ರಮ. 6 ಬಾರಿ ಶಾಸಕರಾಗಿ,ಅರಣ್ಯ,ಗೃಹ, ಸಾರಿಗೆ ಮೊದಲಾದ ಪ್ರಮುಖ ಖಾತೆಗಳ ಸಚಿವರಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಪಿಸಿಸಿ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಜಿಲ್ಲೆಯ

ಹಿರಿಯ ರಾಜಕಾರಣಿ ಬಿ. ರಮಾನಾಥ ರೈ ಯವರ ಹುಟ್ಟು ಹಬ್ಬಕ್ಕೆ ಪ್ರಮುಖರು, ಕಾರ್ಯಕರ್ತರು ಶುಭಾಶಯ ಕೋರಿದ್ದಾರೆ. ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ,
ಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ, ಗೋಕುಲ್ ದಾಸ್ ಮತ್ತಿತರರು ಸನ್ಮಾನಿಸಿ ಶುಭ ಕೋರಿದರು.











