ಸುಳ್ಯ:ಸಂಪಾಜೆಯಿಂದ ಕನಕಮಜಲು ತನಕ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಗಟ್ಟಲು ತಜ್ಞರ ತಂಡದಿಂದ ಸಮಗ್ರ ತಾಂತ್ರಿಕ ರಸ್ತೆ ಸುರಕ್ಷತಾ ಪರಿಶೀಲನೆ ನಡೆಸಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳುವಂತೆ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಅವರು ದ.ಕ. ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ಗಳಿಗೆ ಮನವಿ ಸಲ್ಲಿಸಿದ್ದಾರೆ.ರಾಷ್ಟೀಯ ಹೆದ್ದಾರಿ 275ರಲ್ಲಿ
ಸಂಪಾಜೆ, ಸುಳ್ಯ, ಕನಕಮಜಲು ವ್ಯಾಪ್ತಿಯಲ್ಲಿ ನಿರಂತರ ರಸ್ತೆ ಅಪಘಾತಗಳು ಸಂಭವಿಸಿ ಅನೇಕ ಅಮೂಲ್ಯ ಜೀವಗಳು ಬಲಿಯಾಗಿದ್ದು, ಹಲವರು ಗಂಭೀರ ಗಾಯಗಳಿಂದ ನರಳುತ್ತಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿರುತ್ತದೆ,ಈ ಹಿನ್ನಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟು ರಸ್ತೆಯನ್ನು ತಜ್ಞರ ತಂಡ ದಿಂದ ಪರಿಶೀಲಿಸಿ ಅಪಾಯಕಾರಿ ತಿರುವುಗಳು ಹಾಗೂ ಅಪಘಾತ ಹೆಚ್ಚಾಗಿ ಸಂಭವಿಸುವ ಸ್ಥಳಗಳನ್ನು ಗುರುತಿಸಿ ರಸ್ತೆ ಬದಿಯಲ್ಲಿ ಸುರಕ್ಷತಾ ತಡೆ, ಕರ್ಬ್ಗಳನ್ನು ಅಳವಡಿಸುವುದು, ಸೂಕ್ತ ಬೋರ್ಡ್ ಅಳವಡಿಸುವುದು, ತಿರುವು ಗಳಲ್ಲಿ ವಾಹನ ಕಾಣುವಂತೆ ಕನ್ವೆಕ್ಸ್ಸೇಫ್ಟಿ ಮಿರರ್ ಅಳವಡಿಸುವುದು, ಹೆದ್ದಾರಿಯಲ್ಲಿ ನಿಲ್ಲಿಸದೆ ಆಯ್ದ ಕಡೆಗಳಲ್ಲಿ ಬಸ್ಬೇ ನಿರ್ಮಾಣ ಮೊದಲಾದ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.









