ಸುಳ್ಯ:ಶಾಲಾ ಶಿಕ್ಷಣ ಇಲಾಖೆ (ಪಪೂ )ಮತ್ತು ರೋಟರಿ ಪಿಯು ಕಾಲೇಜು ಮಿತ್ತಡ್ಕ ಸುಳ್ಯ ಇದರ ಸಹಯೋಗದಲ್ಲಿ ಸುಳ್ಯದ ರೋಟರಿ ಶಾಲೆಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪಪೂ ಬಾಲಕರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ
ಹುಡುಗರ ತಂಡ ಚಾಂಪಿಯನ್ ಆಗಿದೆ. ಕೋಚ್ ನಾಗರಾಜ್ ನಾಯ್ಕ್ ಭಟ್ಕಳ ಇವರು ತರಬೇತಿ ನೀಡಿದ್ದರು. ಪ್ರಥಮ ಕಲಾ ವಿಭಾಗದ ಯಶವಂತ್ ಬೆಸ್ಟ್ ರೈಡರ್, ದ್ವಿತೀಯ ವಾಣಿಜ್ಯ ವಿಭಾಗದ ಪ್ರೀತಮ್ ಮುಗದೂರ್ ಬೆಸ್ಟ್ ಡಿಫೆoಡರ್ ಪ್ರಶಸ್ತಿ ಗಳಿಸಿದ್ದಾರೆ.ರೋಟರಿ ಶಾಲೆಯ ಸಂಚಾಲಕ ಪ್ರಭಾಕರನ್ ನಾಯರ್, ಮಧುಸೂದನ್ ಕುಂಭಕ್ಕೋಡು, ಎ.ಸಿ.ವಸಂತ ಮತ್ತಿತರರು ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.











