ಸುಳ್ಯ:ಮಹಿಳಾ ಸಬಲೀಕರಣ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ರೋಟರಿ ಕ್ಲಬ್ ಸುಳ್ಯ ಸಿಟಿ ವತಿಯಿಂದ ಕೊಡಮಾಡಿದ ಪಿಂಕ್ ಅಟೋ (ನೇರಳೆ ಅಟೋ ರಿಕ್ಷಾ) ಹಸ್ತಾಂತರ ಕಾರ್ಯಕ್ರಮ ಸುಳ್ಯದ ಖಾಸಗೀ ಬಸ್ ನಿಲ್ದಾಣದ ಬಳಿಯಲ್ಲಿ ನಡೆಯಿತು. ಗೀತಾ ಜಯನಗರ ಅವರಿಗೆ ಪಿಂಕ್ ಅಟೋ ಹಸ್ತಾಂತರ ಮಾಡಿ ಮಾತನಾಡಿದ
ಶಾಸಕಿ ಭಾಗೀರಥಿ ಮುರುಳ್ಯ ‘ಮಹಿಳಾ ಸಬಲೀಕರಣಕ್ಕೆ ರೋಟರಿ ಕ್ಲಬ್ನ ಉತ್ತಮ ಕೊಡುಗೆ ಇದಾಗಿದೆ. ಸಮುದಾಯದ ಅಭಿವೃದ್ಧಿಯಲ್ಲಿ ರೋಟರಿ ಕ್ಲಬ್ನ ಪಾತ್ರ ಶ್ಲಾಘನೀಯವಾದುದು ಎಂದು ಹೇಳಿದರು.ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಸತೀಶ್ ಬೋಳಾರ್ ಮುಖ್ಯ ಅತಿಥಿಯಾಗಿದ್ದರು.
ಅಸಿಸ್ಟೆಂಟ್ ಗವರ್ನರ್ ಆನಂದ ಖಂಡಿಗ, ಅಸಿಸ್ಟೆಂಟ್ ಗವರ್ನರ್ ಹಾಗು ಪಿಂಕ್ ಅಟೋ ಯೋಜನೆಯ ಜಿಲ್ಲಾ ಸಂಚಾಲಕಿ ಶ್ರುತಿ ಮಾಡ್ತಾ, ಝೋನಲ್ ಲೆಪ್ಟಿನೆಂಟ್ ಗಿರೀಶ್ ನಾರ್ಕೋಡು, ಗವರ್ನರ್ ಅವರ ವಿಶೇಷ ಪ್ರತಿನಿಧಿ ಡಾ.ಕೇಶವ.ಪಿ.ಕೆ, ಬಿಎಂಎಸ್ ರಿಕ್ಷಾ ಯೂನಿಯನ್ ಅಧ್ಯಕ್ಷ ಎಂ.ಎಸ್.ಪ್ರಕಾಶ್, ಸುಳ್ಯ ರೋಟರಿ ಅಧ್ಯಕ್ಷೆ ಲತಾ ಮಧುಸೂದನ್, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ರಾಗೇಶ್ ರಾಘವ್, ಕಾರ್ಯದರ್ಶಿ ಪುರಂದರ ರೈ,ಕೋಶಾಧಿಕಾರಿ ನವೀನ್ ಚಂದ್ರ, ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಲಸ್ರಾದೋ, ಪ್ರಮುಖರಾದ ಪ್ರಭಾಕರನ್ ನಾಯರ್, ಮುರಳೀಧರ ರೈ, ಅಬ್ದುಲ್ ಕಲಾಂ, ಸನತ್ ಪಿ.ಆರ್, ಹರಿರಾಯ ಕಾಮತ್, ಅಬ್ದುಲ್ ಹಮೀದ್ ಜನತಾ, ಪದ್ಮನಾಭ ಬೀಡು,
ಮಧುಕಿರಣ್, ಅಬ್ದುಲ್ ಮಜೀದ್ ಜನತಾ ಮತ್ತಿತರರು ಉಪಸ್ಥಿತರಿದ್ದರು
.









