ಸುಳ್ಯ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಬೀದಿ ನಾಟಕ ಸಮಾಪನಗೊಂಡಿತು.ಸುಳ್ಯ ಹಾಗು ಕಡಬ ತಾಲೂಕಿನಲ್ಲಿ ಎರಡು ಹಂತದಲ್ಲಿ
‘ವಿಶ್ವ ನಾಯಕ ನರೇಂದ್ರ ಮೋದಿ’ ನಾಟಕ 50 ಪ್ರದರ್ಶನ ಕಂಡಿದೆ. ಪ್ರಥಮ ಹಂತದಲ್ಲಿ ಕಡಬ ತಾಲೂಕಿನ 21 ಕಡೆಗಳಲ್ಲಿ ಪ್ರದರ್ಶನ ಮತ್ತು ಎರಡನೇ ಹಂತದಲ್ಲಿ ಸುಳ್ಯ ತಾಲೂಕಿನಲ್ಲಿ 29 ಕಡೆ ಪ್ರದರ್ಶನಗೊಂಡಿತು. ಅ.27ರಂದು ಸಂಜೆ ಜಯನಗರದ ಮಿಲಿಟರಿ ಗ್ರೌಂಡ್ನಲ್ಲಿ ನಡೆದ ಪ್ರದರ್ಶನದೊಂದಿಗೆ ನಾಟಕ ಸಮಾರೋಪಗೊಂಡಿತು. ಬೀದಿ ನಾಟಕದ ಸಮಾರೋಪ ಸಮಾರಂಭದಲ್ಲಿ

ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮುಖ್ಯ ಭಾಷಣ ಮಾಡಿದರು.ಶಾಸಕಿ ಭಾಗೀರಥಿ ಮುರುಳ್ಯ ನಾಟಕ ಕಲಾವಿದರನ್ನು ಗೌರವಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಸುಳ್ಯ ಮಹಾಶಕ್ತಿಕೇಂದ್ರ ಅಧ್ಯಕ್ಷ ಎ.ಟಿ.ಕುಸುಮಾಧರ, ಶಕ್ತಿಕೇಂದ್ರ ಪ್ರಮುಖ್ ರಮೇಶ ಇರಂತಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಬೀದಿ ನಾಟಕದ ರಚನೆ, ನಿರ್ದೆಶನವನ್ನು ಕುಸುಮಾಧರ ಎ.ಟಿ. ಮಾಡಿದ್ದರು.ಕುಸುಮಾಧರ ಎ.ಟಿ ಅವರು ರಚಿಸಿದ ಹಾಡುಗಳನ್ನು ರಾಜ್ ಮುಖೇಶ್ ಸುಳ್ಯ ಸಂಯೋಜನೆ ಮಾಡಿದ್ದರು. ಮೋದಿ ಅವರ ಬದುಕು ಮತ್ತು ಸಾಧನೆಯನ್ನು ಹಾಡು ಮತ್ತು ಸಂಭಾಷಣೆಯ ಮೂಲಕ ಪ್ರಸ್ತುತಪಡಿಸಲಾಗಿತ್ತು.
ನಾಟಕದಲ್ಲಿ ಕುಸುಮಾಧರ ಎ.ಟಿ., ರಾಜ್ ಮುಖೇಶ್ ಸುಳ್ಯ, ಪುಷ್ಪರಾಜ್, ನಾರಾಯಣ ಎಸ್.ಎಂ., ಕೇಶವ ಮಾಸ್ಟರ್, ಚಿದಾನಂದ ವಿದ್ಯಾನಗರ, ಚಿನ್ಮಯಿ,ದುಷ್ಯಂತ್ ಕೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದರು.









