ಸುಳ್ಯ:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗಣ ವೇಷಧಾರಿಗಳ ಆಕರ್ಷಕ ಪಥ ಸಂಚಲನ ಅ.25ರಂದು ಸುಳ್ಯದಲ್ಲಿ ನಡೆಯಿತು.ವಿಜಯದಶಮಿ ಪ್ರಯುಕ್ತ ಸುಳ್ಯ ನಗರ ಹಾಗು ಅಜ್ಜಾವರ ಮಂಡಲದ ವತಿಯಿಂದ ಪಥಸಂಚಲನ ನಡೆಯಿತು.
ಸುಳ್ಯದ ಜ್ಯೋತಿ ವೃತ್ತದಿಂದ ಆರಂಭಗೊಂಡ ಪಥಸಂಚಲನ ಸುಳ್ಯ ಮುಖ್ಯ ರಸ್ತೆಯಲ್ಲಿ ಗಾಂಧಿನಗರ ತನಕ ಸಾಗಿ ಹಿಂತಿರುಗಿ ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿ ಸಮಾಪನಗೊಂಡಿತು.









