ಮುರುಳ್ಯ:ಮುರುಳ್ಯದಲ್ಲಿ ರಕ್ತೇಶ್ವರಿ ದೈವ ಸಾನ್ನಿಧ್ಯ ಇರುವ ಧಾರ್ಮಿಕ ಶ್ರದ್ಧಾ ಕೇಂದ್ರದ ಮುಂಭಾಗದ ಸ್ಥಳವನ್ನು ವಕ್ಫ್ ಬೋರ್ಡ್ಗೆ ದಫನ ಭೂಮಿಗೆ ಕಾದಿರಿಸಿದ್ದಾರೆ ಎಂದು ಆರೋಪಿಸಿ ಮುರುಳ್ಯದ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಅ.28ರಂದು ಮುರುಳ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಸಭೆಯನ್ನು
ಉದ್ದೇಶಿಸಿ ಹಿಂದೂ ಜಾಗರಣ ವೇದಿಕೆ ಮುಖಂಡ ಮೋಹನ್ದಾಸ್ ಪಲ್ಲೋಡಿ,ಮುಖಂಡರಾದ ಕಿಶೋರ್ ಶಿರಾಡಿ, ವಿನಯ ಕುಮಾರ್ ಕಂದಡ್ಕ, ನವೀನ್ ನೆರಿಯ,ಲೋಕಯ್ಯ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುವರ್ಣಿನಿ ಎನ್.ಎಸ್, ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ನಮಿತಾ ಬೆಳ್ಳಾರೆ, ಗಿರಿಧರ ಗೌಡ,ನಾರಾಯಣ ಉಪಸ್ಥಿತರಿದ್ದರು. ಪ್ರತಿಭಟನಾ ಸಭೆಯಲ್ಲಿ

ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ನ.ಸೀತರಾಮ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಪ್ರಮುಖರಾದ ಪ್ರಸನ್ನ ಮಾರ್ತ, ಸುಬೋದ್ ಶೆಟ್ಟಿ ಮೇನಾಲ,ಹರೀಶ್ ಕಂಜಿಪಿಲಿ, ದಿನೇಶ್ ಮೆದು, ಚಂದ್ರಕೋಲ್ಚಾರ್, ಪುಷ್ಪಾ ಮೇದಪ್ಪ, ಭಾರತಿ ಉಳುವಾರು, ಶಶಿಕಲಾ ನೀರಬಿದರೆ,ಕಿಶನ್ ಜಬಳೆ,ಚಂದ್ರಶೇಖರ ಪನ್ನೆ,ಜಗನ್ನಾಥ ಜಯನಗರ,ವಿನುತ ಪಾತಿಕಲ್ಲು, ಪುಷ್ಪಾವತಿ ಬಾಳಿಲ,ಚಂದ್ರಶೇಖರ ಶಾಸ್ತ್ರಿ, ಗುಣವತಿ ಕೊಲ್ಲಂತ್ತಡ್ಕ,ಇಂದಿರಾ ಬಿ.ಕೆ, ಆರ್ ಕೆ ಭಟ್ ಕುರುಂಬುಡೇಲು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ವಸಂತ ನಡುಬೈಲು ಸ್ವಾಗತಿಸಿ ,ಅನೂಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಅನೂಪ್ ಬಿಳಿಮಲೆ ವಂದಿಸಿದರು.
ಬಳಿಕ ಪ್ರತಿಭಟನಾ ನಿರತರು ತಹಶೀಲ್ದಾರ್ ಮಂಜುಳಾ.ಎಂ, ಶಾಸಕಿ ಭಾಗೀರಥಿ ಮುರುಳ್ಯ ,ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.









