ಸುಳ್ಯ:ನಾಡಿನಲ್ಲಿ ಎಲ್ಲೆಡೆ ಚೌತಿ, ಸಾರ್ವಜನಿಕ ಗಣೇಶೋತ್ಸವ ಸಂಭ್ರಮ. ಮಳೆಗಾಲ ಮುಗಿಯುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಬರುತ್ತದೆ. ಬದುಕಿನ ಸಂಭ್ರಮದ ಕ್ಷಣಗಳು ಹೆಚ್ಚುತ್ತವೆ. ಅದರಲ್ಲಿಯೂ ನಾಡಿಗೆ ನಾಡೇ ಸಂಭ್ರಮಿಸುವ ಗಣೇಶ ಹಬ್ಬ, ಸಾರ್ವಜನಿಕ ಗಣೇಶೋತ್ಸವದ ಆಚರಣೆಗೆ ನಾಡು ಅಣಿಯಾಗಿದೆ. ಸೆ.14 ರಂದು ಚೌತಿ ಹಬ್ಬ. ಮುಂದಿನ ಒಂದು
ವಾರಗಳ ಕಾಲ ಎಲ್ಲೆಡೆ ಗಣೇಶ ಹಬ್ಬ. ಹಬ್ಬಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಠೆ ಮಾಡುವ ಗಣಪತಿ ಮೂರ್ತಿಗಳು ಸಿದ್ಧಗೊಂಡಿದೆ. ಎಲ್ಲೆಡೆ ಕಲಾವಿದರ ಕೈಚಳಕದಲ್ಲಿ ವಿಘ್ನ ವಿನಾಶಕನ ಸುಂದರ ಮೂರ್ತಿಗಳು ಅರಳಿ ನಿಂತಿದೆ. ಇಂದು ಸಂಜೆಯ ವೇಳೆಗೆ ಗಣೇಶನ ಮೂರ್ತಿಗಳನ್ನು ಗಣೇಶೋತ್ಸವದ ವೇದಿಕೆಯತ್ತ ಕೊಂಡೊಯ್ದರು. ನಾಳೆ(ಸೆ.14) ಬೆಳಿಗ್ಗೆ ಎಲ್ಲೆಡೆ ಪ್ರತಿಷ್ಠೆ ನಡೆಯುತ್ತದೆ. ಗಣೇಶೋತ್ಸವದ ಕಳೆ ಹೆಚ್ಚುವುದು ಅಲ್ಲಿ ಪೂಜಿಸುವ ಗಣೇಶ ವಿಗ್ರಹದ ಚೈತನ್ಯದಿಂದ. ಪ್ರತಿ ವರ್ಷವೂ ಸುಂದರವಾದ ಮತ್ತು

ಗಡಿ ಗ್ರಾಮವಾದ ಕರಿಕೆಯಲ್ಲಿ ಗಣೇಶೋತ್ಸವಕ್ಕೆ ಕಲಾವಿದ ಸನತ್ ಕರಿಕೆ ತಯಾರಿಸಿದ ಗಣೇಶ ವಿಗ್ರಹ
ಆಕರ್ಷಕ ಗಣಪತಿ ವಿಗ್ರಹಗಳನ್ನು ತಯಾರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಕಲಾವಿದರ ಭಾವನೆಯಲ್ಲಿ ವಿವಿಧ ವರ್ಣ ವೈವಿಧ್ಯತೆಯ ಗಣೇಶ ವಿಗ್ರಹಗಳು ಅವತರಿಸಿವೆ.
ನಾಡಿನಾದ್ಯಂತ ಗಣೇಶೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಕೆಲವೆಡೆ ಒಂದು ದಿನ ಗಣೇಶೋತ್ಸವ ನಡೆದರೆ ಕೆಲವಡೆ, 3, 5, 7 ದಿನಗಳ ಕಾಲ ಸಂಭ್ರಮದ ಗಣೇಶೋತ್ಸವ ನಡೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 404 ಸಾರ್ವಜನಿಕ ಗಣೇಶೋತ್ಸವ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ

ಚಿತ್ರಗಳು:ಸನತ್ ಕರಿಕೆ
ಪೊಲೀಸ್ ಘಟಕದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 230 ಗಣೇಶೋತ್ಸವ, ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ174 ಕಡೆ ಗಣೇಶೋತ್ಸವ ನಡೆಯಲಿದೆ. ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17, ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ18 ಮತ್ತು ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ11 ಕಡೆ ಗಣೇಶೋತ್ಸವ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಗಡಿ ಗ್ರಾಮಗಳಲ್ಲಿಯೂ ಗಣೇಶೋತ್ಸವಕ್ಕೆ ಸಿದ್ಧತೆಗಳು ನಡೆದಿದೆ.











