ಸುಳ್ಯ:ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಲಾಯಿತು.ಆಂದೋಲನದ ಅಂಗವಾಗಿ ವಿವಿಧ ಶ್ರದ್ದಾ ಕೇಂದ್ರಗಳಲ್ಲಿ ಸ್ವಚ್ಛತೆ, ವಿದ್ಯಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉಪನ್ಯಾಸ, ಮನೆ ಮನೆಗಳಿಗೆ
ಕರಪತ್ರ ಹಂಚಿಕೆ, ಸ್ವಚ್ಛತಾ ಜಾಗೃತಿ ಭಿತ್ತಿಪತ್ರ ಅಳವಡಿಕೆ,ಆಯ್ದ ಸ್ಥಳಗಳಲ್ಲಿ ಬಾಟಲ್ ಬೂತ್ ಸ್ಥಾಪನೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.ಈ ಸರಣಿ ಕಾರ್ಯಕ್ರಮದ ಅಂಗವಾಗಿ ಉಪನ್ಯಾಸ ಮತ್ತು ಪೋಸ್ಟರ್ ಬಿಡುಗಡೆ ಗಾಂಧಿನಗರ ಮದರಸ ವಠಾರದಲ್ಲಿ ನಡೆಯಿತು.ಸಂಸ್ಥೆಯ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು.ಗಾಂಧಿನಗರ ಜುಮ್ಮಾ ಮಸ್ಜಿದ್ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ವಿಶೇಷ ಉಪನ್ಯಾಸ ನೀಡಿದರು.
ಗಾಂಧಿನಗರ ಮುದರ್ರಿಸ್ ಮುಬಶಿರ್ ಅಹ್ಸನಿ ಶುಭಾಶoಸನೆ ಮಾಡಿದರು. ಎಂಜೆಎಂ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್ ಭಿತ್ತಿ ಪತ್ರ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಹಮೀದ್ ಬೀಜಕೊಚ್ಚಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫ, ಆಂದೋಲನದ ಸಂಚಾಲಕ ಯಾಕೂಬ್ ಹಾಜಿ ಎಸ್ ಟಿ, ವರ್ತಕರ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ, ಹಾಜಿ ಎಸ್.ಅಬ್ದುಲ್ಲ ಕಟ್ಟೆಕ್ಕಾರ್ ಉಪಸ್ಥಿತರಿದ್ದರು.ಮದ್ರಸ ಮುಖ್ಯ ಶಿಕ್ಷಕ ಸಿರಾಜುದ್ದೀನ್ ಸಖಾಫಿ ಸ್ವಾಗತಿಸಿ, ನಿರ್ದೇಶಕ ಶಾಫಿ ಕುತ್ತಮೊಟ್ಟೆ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ, ಹನೀಫ್ ಜನತಾ, ಹನೀಫ್ ಬುಶ್ರಾ, ನಿರ್ದೇಶಕರು ಗಳಾದ ಅಬ್ದುಲ್ ಗಫ್ಫಾರ್, ಮಜೀದ್ ಕೆ. ಪಿ, ಸಿರಾಜ್ ಫ್ಯಾನ್ಸಿ, ಮುಹಿಯ್ಯದ್ದೀನ್ ಫ್ಯಾನ್ಸಿ, ಮದರಸ ಉಸ್ತಾದ್ ಕುಂಜಿಲ ಮದನಿ, ಮೆನೇಜರ್ ಮುನೀರ್ ಅನ್ಸಾರ್ ಮೊದಲಾದವರು ಭಾಗವಹಿಸಿದ್ದರು.









