ಸುಳ್ಯ:ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ವತಿಯಿಂದ ಹಮ್ಮಿಕೊಂಡಿರುವ ‘ಕನ್ನಡ ಯಾತ್ರೆ’ಗೆ ಜಾಲ್ಸೂರಿನಲ್ಲಿ ಸ್ವಾಗತ ನೀಡಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ, ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ, ಗೌರವ ಸಲಹೆಗಾರರಾದ
ಪಿ.ಬಿ. ಸುಧಾಕರ ರೈ, ಬದಿಯಡ್ಕ ತುಳು ಭವನದ ಮುಖ್ಯಸ್ಥ ಅಖಿಲೇಶ್ ನಗುಮುಗಂ, ಸುಳ್ಯ ಅಗ್ನಿಶಾಮಕ ಕಚೇರಿಯ ಉಪನಿರೀಕ್ಷಕರಾದ ಕಿರಣ್ ಕುಮಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಸರಗೋಡು ವಿಭಾಗದ ಮುಖ್ಯಸ್ಥರಾದ ತಾರನಾಥ ರೈ, ಕಲಾವಿದ ವಸಂತ ಬಾರಡ್ಕ ಕಾಸರಗೋಡು, ಜಾಲ್ಸೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಾಬು, ಅಶೋಕ್ ಅಡ್ಕಾರ್, ಯಶ್ವಿತ್ ಕಾಳಂಮ್ಮನೆ,ಎಂ ಎಸ್ ಭಟ್, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ
ಪದಾಧಿಕಾರಿಗಳಾದ ಹಮೀದ್ ಸುಣ್ಣಮೂಲೆ, ನಝೀರ್ ಶಾಂತಿನಗರ, ಶಂಕರ್ ಪೆರಾಜೆ, ರಂಜಿತ್ ಪೂಜಾರಿ, ಸುಜಾತ ಕದಿಕಡ್ಕ ಮೊದಲಾದವರು ಉಪಸ್ಥಿತರಿದ್ದರು.ಅಭಿಯಾನದ ಸುಳ್ಯ ತಾಲೂಕು ಅಧ್ಯಕ್ಷ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಅಶೋಕ್ ಪೀಚೆ ವಂದಿಸಿದರು.









