ಸುಳ್ಯ:ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೆಕಲ್ಲು ಹಾಗೂ
ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಕೆ.ಎಂ ನುಡಿನಮನ ಸಲ್ಲಿಸಿದರು. ಪ್ರಮುಖರಾದ ರಂಜಿತ್ ರೈ ಮೇನಾಲ,ರವೀಂದ್ರ ತೊಡಿಕಾನ, ರವಿ ಗುಂಡಡ್ಕ, ಪರಶುರಾಮ ಚಿಲ್ತಡ್ಕ, ರಾಮಕೃಷ್ಣ ಆಲೆಟ್ಟಿ, ಪುರುಷೋತ್ತಮ ನಂಗಾರು, ತೀರ್ಥರಾಮ ಜಾಲ್ಸೂರು, ಮಹೇಶ್ ಬೆಳ್ಳಾರ್ಕರ್, ಸತ್ಯ ಕುಮಾರ್ ಆಡಿಂಜ, ವಿಜಯಕುಮಾರ್ ನರಿಯೂರು, ಮಂಜುನಾಥ ಮಡ್ತಿಲ ಮತ್ತಿತರರು ಉಪಸ್ಥಿತರಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್.ಕೆ ಹನೀಫ್ ಸಂಪಾಜೆ ವಂದಿಸಿದರು.













