ಅಹಮದಾಬಾದ್ : ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ ಅವರ ಶತಕದ ಜೊತೆಯಾಟದ ಬಲದಿಂದ ಗುಜರಾತ್ ಟೈಟನ್ಸ್ ತಂಡವು ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 89 ರನ್ಗಳಿಂದ ಸುಲಭವಾಗಿ ಮಣಿಸಿತು. ಈ ಸೋಲಿನೊಂದಿಗೆ
ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡವು ಪ್ಲೇ ಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿತ್ತು.ಉಭಯ ತಂಡಗಳಿಗೆ ಇದು ಲೀಗ್ ಹಂತದಲ್ಲಿ ಕೊನೆಯ ಪಂದ್ಯವಾಗಿತ್ತು. ಗುಜರಾತ್ ತಂಡವು ಈ ಮೊದಲೇ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಈ ಗೆಲುವಿನೊಂದಿಗೆ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೆನ್ನೈ ತಂಡವು ಈ ಪಂದ್ಯವನ್ನು ಗೆದ್ದಿದ್ದರೆ ಮುಂದಿನ ಹಂತಕ್ಕೇರುವ ಕ್ಷಿಣ ಅವಕಾಶ ಜೀವಂತವಾಗಿ ಉಳಿಯುತ್ತಿತ್ತು. ಆದರೆ, ಹ್ಯಾಟ್ರಿಕ್ ಸೋಲಿನೊಂದಿಗೆ ಋತುರಾಜ್ ಗಾಯಕವಾಡ್ ಪಡೆಯು ಈ ಬಾರಿಯ ಅಭಿಯಾನ ಮುಗಿಸಿತು.
ಟೈಟನ್ಸ್ ಪರ ಸಾಯಿ (84; 53ಎ, 4X7, 6X4) ಮತ್ತು ಗಿಲ್ (64; 37ಎ, 4X7, 6X3) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 125 ರನ್ ಸೇರಿಸಿದರು. ಜೋಸ್ ಬಟ್ಲರ್ (ಔಟಾಗದೇ 57; 27ಎ, 4X5, 6X4) ಅವರೂ ಮಿಂಚಿನ ಅರ್ಧಶತಕ ಹೊಡೆದರು. ಅದರಿಂದಾಗಿ ಟೈಟನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 229 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ತಂಡವು 13.4 ಓವರ್ಗಳಲ್ಲಿ 140 ರನ್ ಗಳಿಸಿ ಹೋರಾಟ ಮುಗಿಸಿತು.
ಟೈಟನ್ಸ್ನ ವೇಗಿಗಳಾದ ಮೊಹಮ್ಮದ್ ಸಿರಾಜ್ (26ಕ್ಕೆ 3), ಕಗಿಸೊ ರಬಾಡ (32ಕ್ಕೆ 3) ಮತ್ತು ಸ್ಪಿನ್ನರ್ ರಶೀದ್ ಖಾನ್ (18ಕ್ಕೆ 3) ಅವರ ಪರಿಣಾಮಕಾರಿ ದಾಳಿಗೆ ತತ್ತರಿಸಿತು. ಶಿವಂ ದುಬೆ (47;17ಎ) ಹೊರತುಪಡಿಸಿ ಉಳಿಸಿ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು.













